ನಾಳೆ ಆ.8ಕ್ಕೆ ಆಕಾಶವಾಣಿಯಲ್ಲಿ ಶಿಕ್ಷಕ ಪ್ರಶಾಂತ್ ಅನಂತಾಡಿಯವರಿಂದ ಭಾಷಣ

0


ಪುತ್ತೂರು: ಆಕಾಶವಾಣಿಯ ಮಂಗಳೂರು ಕೇಂದ್ರದಿಂದ ಆ.8ರಂದು ರಾತ್ರಿ 8.30ಕ್ಕೆ ಶಿಕ್ಷಕ ಪ್ರಶಾಂತ್ ಅನಂತಾಡಿಯವರಿಂದ “ಭಾರತ ಸ್ವಾತಂತ್ರ್ಯ ಹೋರಾಟದ ಗಟ್ಟಿ ಧ್ವನಿ – ಕ್ವಿಟ್ ಇಂಡಿಯಾ ಚಳುವಳಿ” ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಭಾಷಣವು ಪ್ರಸಾರವಾಗಲಿದೆ.

1942 ಆಗಸ್ಟ್ 8ರ ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನ ಭಾಗವಾಗಿ ದೇಶದಾದ್ಯಂತ ಸದ್ರಿ ದಿನದ ಆಚರಣೆಯು ಪ್ರತಿವರ್ಷ ನಡೆಯುತಿದ್ದು, ಭಾಷಣದಲ್ಲಿ ಚಳುವಳಿಯ ಹಿನ್ನೆಲೆ, ನಡೆದ ಹಾದಿ, ಪರಿಣಾಮಗಳ ಕುರಿತಂತೆ ವಿವರಗಳಿವೆ. ಪ್ರಸ್ತುತ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು, ಪುತ್ತೂರು ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಶಾಂತ್ ಅನಂತಾಡಿಯವರ ಹಲವು ಭಾಷಣಗಳು ಆಕಾಶವಾಣಿಯಿಂದ ಪ್ರಸಾರಗೊಂಡಿದೆ. ಇವರು ಪ್ರಸ್ತುತಪಡಿಸಿದ ‘ ಶಿಕ್ಷಣದಲ್ಲಿ ಸಾಹಿತ್ಯ – ಹೊಸಸಾಧ್ಯತೆಗಳು ‘, ‘ ಸ್ವಾತಂತ್ರ್ಯೋತ್ತರ ಭಾರತದ ಶೈಕ್ಷಣಿಕ ಸಾಧನಾಪಥ ‘ ವಿಷಯಕ್ಕೆ ಸಂಬಂಧಿಸಿದ ಭಾಷಣಗಳು ಹಲವು ಬಾರಿ ಪ್ರಸಾರವಾಗಿತ್ತು.

LEAVE A REPLY

Please enter your comment!
Please enter your name here