ಪುತ್ತೂರು: ಬನ್ನೂರು ಗ್ರಾ.ಪಂ.ಸಭಾಂಗಣದಲ್ಲಿ ಆ.5ರಂದು ಜನ ಸುರಕ್ಷಾ ಅಭಿಯಾನ ನಡೆಯಿತು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ವಲಯ ಕಚೇರಿಯ ಉಪಮುಖ್ಯಸ್ಥೆ ರಾಜಾಮಣಿ, ಮಂಗಳೂರು ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ನರಸಿಂಹ ಕುಮಾರ್, ಯೂನಿಯನ್ ಬ್ಯಾಂಕ್ ಮ್ಯಾನೇಜರ್ ವೈರಾ ಕುಮಾರ್, ಗ್ರಾ.ಪಂ.ಪಿಡಿಒ ಚಿತ್ರಾವತಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಂಗಳೂರು ಪ್ರಾದೇಶಿಕ ಕಚೇರಿಯ ಗ್ರಾಮೀಣ ಕೃಷಿ ವ್ಯವಹಾರ ಇಲಾಖೆಯ ಮುಖ್ಯಸ್ಥ ದಿನೇಶ್ ಹೆಚ್.ಕೆ., ಸಿಎಫ್‌ಎಲ್ ಗೀತಾ, ಎನ್‌ಆರ್‌ಎಲ್‌ಎಂನ ನಳಿನಿ ಉಪಸ್ಥಿತರಿದ್ದರು.

ಬ್ಯಾಂಕ್‌ನ ಸಿಬ್ಬಂದಿಗಳು ಬ್ಯಾಂಕ್ ವ್ಯವಹಾರ, ಸಾಲ ಸೌಲಭ್ಯ, ವಿಮೆಗಳ ಬಗ್ಗೆ ಎನ್‌ಆರ್‌ಎಲ್‌ಎಂ ಯೋಜನೆಯ ಮೂಲಕ ದೊರೆಯುವ ಸಬ್ಸಿಡಿ ಸಾಲಗಳು, ಮಹಿಳಾ ಉದ್ದಿಮೆದಾರರಿಗೆ ಲಕ್‌ಪತಿ ಯೋಜನೆಯ ಮೂಲಕ ಸಿಗುವ ಸಾಲದ ವಿವರಗಳನ್ನು ವಿವರಿಸಿದರು. ಎಂಬಿಕೆ ಮಮತಾ ಸ್ವಾಗತಿಸಿದರು. ಪಶುಸಖಿ ನಳಿನಿ ವಂದಿಸಿದರು. ಎಲ್‌ಸಿಆರ್‌ಪಿ ಭವ್ಯ ನಿರೂಪಿಸಿದರು. ಒಕ್ಕೂಟದ ಅಧ್ಯಕ್ಷೆ ರಮ್ಯಾಕುಮಾರಿ ಹಾಗೂ ಸ್ವಚ್ಛವಾಹಿನಿಯ ಚಾಲಕಿ ಗಿರಿಜಾ ಪ್ರಾರ್ಥಿಸಿದರು.

ಬಿಸಿ ಸಖಿ ರೇಷ್ಮಾ, ಎಲ್‌ಸಿಆರ್‌ಪಿ ಧನಲಕ್ಷ್ಮೀ, ಕೃಷಿಸಖಿ ರೂಪ, ಕೃಷಿ ಉದ್ಯೋಗ ಸಖಿ ಅನುರಾಧ ಅವರು ವಿಮೆ ಹಾಗೂ ಖಾತೆ ತೆರೆಯುವಲ್ಲಿ ಫಲಾನುಭವಿಗಳಿಗೆ ಸಹಕರಿಸಿ, ಬ್ಯಾಂಕ್ ಸಿಬ್ಬಂದಿಗಳೊಂದಿಗೆ ಅರ್ಜಿ ಫಾರಂ ಭರ್ತಿ ಮಾಡುವಲ್ಲಿ ಕೈಜೋಡಿಸಿದರು. ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು ಸಹಕರಿಸಿದರು. ಸಭೆಯಲ್ಲಿ ಸಂಘದ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.