ವರಮಹಾಲಕ್ಷ್ಮಿ ಪೂಜೆಗೆ ದೇವಳದಿಂದ ಅನ್ನಪ್ರಸಾದ ವಿತರಣೆ ಗೊಂದಲ

0

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸಮರ್ಪಣಾ ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಶಕುಂತಳಾ ಶೆಟ್ಟಿ ದೇವಳದಲ್ಲಿ ಅನ್ನಪ್ರಸಾದ ಸ್ವೀಕರಿಸಿ‌ ಕಮ್ಯುನಿಕೇಶನ್ ಗ್ಯಾಪ್ ಗೆ ಅಂತ್ಯ

ಪುತ್ತೂರು: ಆ.8 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಸಮರ್ಪಣಾ ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಶಕುಂತಳಾ ಶೆಟ್ಡಿಯವರ ನೇತೃತ್ವದಲ್ಲಿ ನಡೆಯುವ ವರಮಹಾಲಕ್ಷ್ಮೀ ಪೂಜೆಗೆ ದೇವಳದಿಂದ ಅನ್ನಪ್ರಸಾದ ವಿತರಣೆ ಆಗುವುದಿಲ್ಲ ಎಂಬ ಕುರಿತು‌ ಸಾರ್ವಜನಿಕ ವಲಯದಲ್ಲಾದ ಗೊಂದಲಕ್ಕೆ ಶಕುಂತಳಾ ಶೆಟ್ಟಿ ಮತ್ತು‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಜೊತೆಯಲ್ಲಿ ಆ.7ರಂದು ದೇವಳದಲ್ಲಿ ಮಧ್ಯಾಹ್ನ ಅನ್ನಪ್ರಸಾದ ಸ್ವೀಕರಿಸಿ ಮಾತುಕತೆಯ ಮೂಲಕ ಗೊಂದಲಕ್ಕೆ ತೆರೆ ಎಳೆಯಲಾಗಿದೆ.

ಒಟ್ಟು ಸಮಸ್ಯೆ ಬಂದಿರುವುದು ಕಮ್ಯುನಿಕೇಶನ್ ಗ್ಯಾಪ್ ನಿಂದಾಗಿ ಎಂದು ಎರಡು‌ ಕಡೆಯವರು ಅರ್ಥೈಸಿಕೊಂಡಿದ್ದಾರೆ. ವರಮಹಾಲಕ್ಷ್ಮೀ ಪೂಜೆಗೆ ಅನ್ನಪ್ರಸಾದ ದೇವಳದಿಂದ ನೀಡಲಾಗುವುದಿಲ್ಲ ಎಂದು ಆ.6 ರಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಡಿ ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾಗಿತ್ತು. ಈ ನಡುವೆ ಪ್ರಭಾವಿ ರಾಜಕಾರಣಿಯೋರ್ವರು ಮಧ್ಯೆ ಪ್ರವೇಶಿಸಿ ಮಧ್ಯಾಹ್ನದ ವೇಳೆ ಗೊಂದಲಕ್ಕೆ ತೆರೆ ಎಳೆದಿದ್ದರು.

ಆ.7ರಂದು ಮಧ್ಯಾಹ್ನ ಸಮರ್ಪಣಾ ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಶಕುಂತಳಾ ಶೆಟ್ಟಿ, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಶುಭ ಮಾಲಿನಿ ಮಲ್ಲಿ, ಜಯಂತಿ ನಾಯ್ಕ್, ಗಂಗಾರತ್ನ ವಿ ರೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಸುಭಾಶ್ ರೈ ಬೆಳ್ಳಿಪ್ಪಾಡಿ ಜೊತೆಯಲ್ಲಿ ದೇವಳದ ಅನ್ನಪ್ರಸಾದ ಸ್ವೀಕರಿಸಿ ಗೊಂದಲಕ್ಕೆ ತೆರೆ ಎಳೆದರು.

LEAVE A REPLY

Please enter your comment!
Please enter your name here