ಪುತ್ತೂರು: ಪುತ್ತೂರಿನ ಸಾಮೆತ್ತಡ್ಕ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ಪುತ್ರನೊಂದಿಗೆ ನೆಲೆಸಿದ್ದ, ಸಂತ ಫಿಲೋಮಿನಾ ಕಾಲೇಜಿನ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ, ಪ್ರಾಧ್ಯಾಪಕ ಡಾ|ಒ.ಜಿ ಪಾಲನ್ನ(ಆಲಿವರ್ ಗ್ಲ್ಯಾಡ್ಸನ್ ಪಾಲನ್ನ, 84ವ.) ರವರು ಅಸೌಖ್ಯದಿಂದ ಆ.7 ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ.
ಶಿರಸ್ತೇದಾರರಾಗಿದ್ದ ತಂದೆ ದಿ.ಜೆ.ಸಿ ಪಾಲನ್ನ ಹಾಗೂ ಕೌನ್ಸಿಲರ್ ಆಗಿದ್ದ ತಾಯಿ ದಿ.ಸುಂದರಿ ಲೀಲಾವತಿ ಪಾಲನ್ನರವರ ಪುತ್ರರಾದ ಒ.ಜಿ ಪಾಲನ್ನರವರು ಸಂತ ಫಿಲೋಮಿನಾ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ 33 ವರ್ಷಗಳ ಸೇವೆಯನ್ನು ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಐಐಟಿ ಪೋವೈ ನಲ್ಲಿ ಡಾಕ್ಟರೇಟ್ ಪಡೆದು ಪ್ರಾಧ್ಯಾಪಕ ವೃತ್ತಿಯ ಜೊತೆಗೆ ಪಾಲ್ಸನ್ ಪೆನ್ ಇಂಡಸ್ಟ್ರಿಯನ್ನು ಅವರು ಹೊಂದಿದ್ದರು. ವೃತ್ತಿಯಿಂದ ನಿವೃತ್ತರಾದ ಬಳಿಕ ಒ.ಜಿ ಪಾಲನ್ನರವರು ಬೆಂಗಳೂರಿನ AMC ಇಂಜಿನಿಯರಿಂಗ್ ಕಾಲೇಜು, East west ಇಂಜಿನಿಯರಿಂಗ್ ಕಾಲೇಜು, RNS ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿಯೂ 10ವರ್ಷಗಳ ಸೇವೆ ಸಲ್ಲಿಸಿ ಕರ್ತವ್ಯ ನಿರ್ವಹಿಸಿರುತ್ತಾರೆ. ಅಲ್ಲದೆ ಅವರು ರಸಾಯನ ಶಾಸ್ತ್ರದಲ್ಲಿ ಅನೇಕ ಪಠ್ಯ ಪುಸ್ತಕಗಳನ್ನು ರಚಿಸಿರುತ್ತಾರೆ.
ಮೃತರು ಪತ್ನಿ ಪ್ರೇಮ ಪಾಲನ್ನ, ಪುತ್ರರಾದ ಯು.ಕೆಯಲ್ಲಿ ಉದ್ಯೋಗದಲ್ಲಿರುವ ಸುಧೀರ್ ಪಾಲನ್ನ/ಸಹನಾ ಪಾಲನ್ನ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುದೀಪ್ ಪಾಲನ್ನ/ದೀಕ್ಷಾ ಪಾಲನ್ನ, ಪುತ್ರಿ ಸರಿತಾ ಸೋನ್ಸ್ ಮಂಗಳೂರು ಮತ್ತು ಅಳಿಯ ಮಂಗಳೂರಿನಲ್ಲಿ ಮಕ್ಕಳ ತಜ್ಞರಾಗಿರುವ ಡಾ.ಸಂತೋಷ್ ಸೋನ್ಸ್, ಅಲ್ಲದೆ, ಸಹೋದರ ರೋಲೆಂಡ್ ಪಾಲನ್ನ, ಸಹೋದರಿ ಎವ್ಲಿನ್ ಪಾಲನ್ನರವರನ್ನು ಮತ್ತು ಎಂಟು ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.