ನಿಡ್ಪಳ್ಳಿ; ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಆರ್ಲಪದವು ಪಾಣಾಜೆ ಇದರ ವತಿಯಿಂದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ ಮತ್ತು ಕಥಾ ಪ್ರವಚನ ವೇದಮೂರ್ತಿ ಶ್ರೀ ಕೃಷ್ಣ ಭಟ್ ಭಟ್ಯಮೂಲೆ ಅವರ ನೇತೃತ್ವದಲ್ಲಿ ಆ.8 ರಂದು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು.
ಕಾರ್ತಿಕೇಯ ಮಹಿಳಾ ಭಜನಾ ಮಂಡಳಿ ಆರ್ಲಪದವು ಮತ್ತು ಭಾರತಾಂಭಾ ಮಹಿಳಾ ಭಜನಾ ಮಂಡಳಿ ಆರ್ಲಪದವು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಸಭೆ; ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜಾ ಸಮಿತಿ ಅಧ್ಯಕ್ಷೆ ಗೀತಾ.ಆರ್ ರೈ ವಹಿಸಿದ್ದರು. ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ ಇಲ್ಲಿಯ ಸಹ ಪ್ರಾಧ್ಯಾಪಕಿ ಹರಿಣಿ ಪುತ್ತೂರಾಯ ಧಾರ್ಮಿಕ ಉಪನ್ಯಾಸ ನೀಡಿದರು.ನಿವೃತ್ತ ಮುಖ್ಯ ಗುರು ಪ್ರತಿಭಾ ಓಕುಣ್ಣಾಯ, ಪೂಜಾ ಸಮಿತಿಯ ಗೌರವಾಧ್ಯಕ್ಷ ಶ್ರೀಕೃಷ್ಣ ಬೋಳಿಲ್ಲಾ ಯ ಕಡಮಾಜೆ, ಪೂಜಾ ಸಮಿತಿಯ ಕಾರ್ಯದರ್ಶಿ ಶಾರದಾ ಗೋಪಾಲ ಕೊಂದಲ್ಕಾನ, ಉಪಾಧ್ಯಕ್ಷೆ ಅನುರಾಧ ರೈ , ಕೋಶಾಧಿಕಾರಿ ಜಯಶ್ರೀ ದೇವಸ್ಯ, ಜತೆ ಕಾರ್ಯದರ್ಶಿ ಗೀತಾ ದೇವಸ್ಯ ವೇದಿಕಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಶಾರದಾ ಗೋಪಾಲ ಕೊಂದಲ್ಕಾನ ವರದಿ ವಾಚಿಸಿದರು. ಅನುರಾಧ ರೈ ಸ್ವಾಗತಿದರು. ಗೀತಾ ದೇವಸ್ಯ ವಂದಿಸಿದರು. ಸುಪ್ರೀತ ಕಾಟುಕುಕ್ಕೆ ಕಾರ್ಯಕ್ರಮ ನಿರೂಪಿಸಿದರು.