ಪುತ್ತೂರು: ಬೆಂಗಳೂರಿನಿಂದ ಮಂಗಳೂರಿಗೆ ಕೆಎಂಸಿ ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಗುಂಡ್ಯ ಬಳಿ ಮುಂದಿನಿಂದ ಕಾರೊಂದು ಆಂಬುಲೆನ್ಸ್ ಗೆ ದಾರಿ ಮಾಡಿಕೊಡದೆ ಅಡ್ಡ ಅಡ್ಡಪಡಿಸಿರುತ್ತಾರೆ ಎಂದು ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆಂಬುಲೆನ್ಸ್ ಚಾಲಕ ಅನೀಫ್ ಎಂಬುವರು ದೂರು ಈ ಕುರಿತು ನೀಡಿದ್ದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿ ದೂರು ಸ್ವೀಕರಿಸಿಕೊಂಡು ಅಡ್ಡಿಪಡಿಸಿದ ಕೆಎ 21 ಸಿ 6687 ಕಾರಿಗೆ 6000 ರೂಪಾಯಿ ದಂಡ ವಿಧಿಸಿರುವುದಾಗಿದೆ ಎಂದು ತಿಳಿದುಬಂದಿದೆ.ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿತ್ತು.