ವಿಟ್ಲ: ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದಲ್ಲಿ ಶ್ರೀ ಚಾಮುಂಡೇಶ್ವರೀ ಮಾತೃ ಮಂಡಳಿಯ ವತಿಯಿಂದ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವರಮಹಾಲಕ್ಷ್ಮೀ ಪೂಜೆ ನಡೆಯಿತು. ಇದೇ ಸೆ.22ರಿಂದ ಸೆ.30ರ ವರೆಗೆ ನಡೆಯಲಿರುವ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ಪುರೋಹಿತರಾದ ಮಹೇಶ್ ಭಟ್, ಈಶ್ವರ ಭಟ್,ಟ್ರಸ್ಟ್ ನ ಕಾರ್ಯದರ್ಶಿ ಚಂದ್ರಶೇಖರ ಕಣಿಯೂರು, ಮಾತೃ ಮಂಡಳಿ ಅಧ್ಯಕ್ಷರಾದ ಸುಜಾತ ಉಪಸ್ಥಿತರಿದ್ದರು. ರೇಣುಕಾ ಲೋಕೇಶ್ ಕಣಿಯೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಲ ಮಹಾ ಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಶ್ರೀಗಳಿಂದ ಸೇರಿದ ಭಕ್ತರಿಗೆ ರಕ್ಷಾಧಾರ ಮಂತ್ರಾಕ್ಷತೆ ನೀಡಲಾಯಿತು.