





ಪುತ್ತೂರು:ಬೆಥನಿ ಸಂಸ್ಥೆಯ ಜನರಲ್ ಕೌನ್ಸಿಲರ್ ಭಗಿನಿ ಡಾ. ಮಾರಿಯೇಟ್ ಬಿ.ಎಸ್. ಹಾಗೂ ಪ್ರೊಕ್ಯುರೇಟರ್ ಜನರಲ್ ಭಗಿನಿ ವೈಲೆಟ್ ಬಿ.ಎಸ್. ಅವರು ಆ.9ರಂದು ದರ್ಬೆ ಪಾಂಗಳಾಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದರು.



ಬಳಿಕ ಭಗಿನಿ ಡಾ.ಮಾರಿಯೇಟ್ ಬಿ.ಎಸ್. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ, ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸುವಂತೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.






ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಮನರಂಜಿಸಿದರು. ಪ್ರಾಂಶುಪಾಲೆ ಭಗಿನಿ ಅನಿತಾ ಬಿ.ಎಸ್. ಸ್ವಾಗತಿಸಿದರು. ಶಾಲಾ ನಾಯಕಿ ವಿಯೋಲಾ ವಂದಿಸಿದರು. ಶಿಕ್ಷಕಿ ಲಿಲ್ಲಿ ಕಾರ್ಯಕ್ರಮ ನಿರೂಪಿಸಿದರು.










