ವ್ಯಕ್ತಿತ್ವ ನಿರ್ಮಾಣಕ್ಕೆ ಕ್ಲಬ್ ಪೂರಕವಾಗಿದೆ-ಶಬರಿ ಕಡಿದಾಳ್
ಪುತ್ತೂರು: ಎಲ್ಲರಿಗೂ ವಿಶೇಷವಾದ ಪ್ರತಿಭೆಗಳಿರುತ್ತದೆ. ಪ್ರತಿಭೆಗಳು ಹೊರಹೊಮ್ಮಲು ಇನ್ನರ್‌ವೀಲ್ ಒಂದು ಅಡಿಪಾಯವಾಗಿದೆ ಹಾಗೂ ಅವಕಾಶವನ್ನು ಒದಗಿಸುತ್ತದೆ. ನಿಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಕ್ಲಬ್ ಪೂರಕವಾಗಿದೆ. ನಿಮ್ಮನ್ನು ಮೌಲ್ಡ್ ಮಾಡಲು ಕ್ಲಬ್ ಸಹಾಯಕಾರಿಯಾಗಿದೆ ಎಂದು ಇನ್ನರ್‌ವೀಲ್ ಕ್ಲಬ್ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ಹೇಳಿದರು.

ಪುತ್ತೂರು ಇನ್ನರ್‌ವೀಲ್ ಕ್ಲಬ್‌ಗೆ ಅಧಿಕೃತ ಭೇಟಿ ಹಾಗೂ ಕ್ಲಬ್‌ನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬಳಿಕ ರೋಟರಿ ಮನಿಷಾ ಹಾಲ್‌ನಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಾನು ಇನ್ನರ್‌ವೀಲ್ ಕ್ಲಬ್‌ನ ಸದಸ್ಯಳಾಗಿ ಮೂರು ವರ್ಷಗಳ ಬಳಿಕ ಐಎಸ್‌ಒ ಆಗಿದ್ದೆ. ಹುದ್ದೆ ಅಲಂಕರಿಸಿದ ಮೇಲೆ ಕ್ಲಬ್‌ನಲ್ಲಿ ಆಸಕ್ತಿ ಹುಟ್ಟಿತ್ತು. ಕ್ಲಬ್ ಬಗ್ಗೆ ತಿಳಿಯುವಂತಾಯಿತು. ಆದುದರಿಂದ ಕ್ಲಬ್‌ನಲ್ಲಿ ಎಲ್ಲಾ ಹುದ್ದೆಗಳನ್ನು ನೀವು ಕೂಡ ಅಲಂಕರಿಸಬೇಕು. ಆಗ ಕಲಿಯಲು ಸಾಧ್ಯವಾಗುತ್ತದೆ. ಅಲ್ಲದೆ ಅನುಭವವೂ ಸಿಗುತ್ತದೆ ಎಂದರು. ಪುತ್ತೂರು ಇನ್ನರ್‌ವೀಲ್ ಕ್ಲಬ್ ಮೇಲೆ ನನಗೆ ಅಭಿಮಾನ ಇದೆ. ಪುತ್ತೂರಿಗೆ ಹಲವು ಬಾರಿ ಭೇಟಿ ನೀಡಿದ್ದೇನೆ. ಇಂದು ಭೇಟಿ ನೀಡಿದ್ದು, ತುಂಬಾ ಸಂತೋಷವಾಗಿದೆ ಎಂದ ಅವರು ಕ್ಲಬ್‌ನ ಮೂಲಕ ಸಣ್ಣ ಸಣ್ಣ ಯೋಜನೆಗಳನ್ನು ಹಾಕಿಕೊಳ್ಳಿ. ಅದರ ಜತೆಗೆ ಶಾಶ್ವತವಾಗಿ ಉಳಿಯುವ ಯೋಜನೆಗಳನ್ನು ಮಾಡಿ ಎಂದು ಸಲಹೆ ನೀಡಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಟ್ಲ ಮೂರುಕಜೆ ಮೈತ್ರೈಯಿ ಗುರುಕುಲದ ಸಾವಿತ್ರಿ ಭಗಿನಿ ಮಾತನಾಡಿ ಗುರುಕುಲ ಪ್ರಾರಂಭವಾಗಿ 32 ವರ್ಷವಾಗಿದೆ. ಭಾರತದ ಒಂಭತ್ತು ರಾಜ್ಯಗಳ 160 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಸ್ತ್ರ ನಿಷ್ಠೆ ಹಾಗೂ ರಾಷ್ಟ್ರಪ್ರೇಮ ಬೆಳೆಸುವ ಶಿಕ್ಷಣ ಗುರುಕುಲ ಶಿಕ್ಷಣವಾಗಿದೆ. ವೇದಗಳ ಶಿಕ್ಷಣಕ್ಕೆ ಜಾತಿಗಳ ಬೇಧವಿಲ್ಲ. ಭಾರತತೀಯ ಜ್ಞಾನ ಪರಂಪರೆ ಸಮಾಜದ ಎಲ್ಲರಿಗೂ ಸಿಗಬೇಕು ಎಂಬ ಉದ್ಧೇಶ ಗುರುಕುಲದ್ದಾಗಿದೆ. ನಮ್ಮ ಗುರುಕುಲವನ್ನು ಗುರುತಿಸಿ ಗೌರವಿಸಿದ್ದು ಅಭಿನಂದನೀಯ ಎಂದ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರೂಪರೇಖಾ ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ವರ್ಷದ ಅವಧಿಯಲ್ಲಿ ಕ್ಲಬ್‌ಗಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತದೆ. 318 ರ 55 ಕ್ಲಬ್‌ಗಳಲ್ಲಿ ಜಿಲ್ಲಾಧ್ಯಕ್ಷರ ಪ್ರಥಮ ಭೇಟಿ ನಮ್ಮ ಕ್ಲಬ್‌ಗೆ ಆಗಿದೆ. ದಿಟ್ಟ ನಾಯಕತ್ವ ಹಾಗೂ ಸಂಘಟನಾ ಸಾಮರ್ಥ್ಯ ಹೊಂದಿರುವ ಜಿಲ್ಲಾಧ್ಯಕ್ಷರ ಮುಂದಿನ ಕ್ಲಬ್‌ಗಳ ಭೇಟಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿ ಸ್ವಾಗತಿಸಿದರು.
ಬುಲೆಟಿನ್ ಬಿಡುಗಡೆ:
ಕ್ಲಬ್‌ನ ಬುಲೆಟಿನ್ ಬಿಡುಗಡೆಗೊಳಿಸಲಾಯಿತು. ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್‌ರವರು ಬುಲೆಟಿನ್ ಬಿಡುಗಡೆಗೊಳಿಸಿದರು. ಕ್ಲಬ್‌ನ ಬುಲೆಟಿನ್ ಸಂಪಾದಕರಾದ ಕೃಷ್ಣವೇಣಿ ಮುಳಿಯರವರು ಬುಲೆಟಿನ್ ವಿವರ ತಿಳಿಸಿ ಕಾರ್ಯಕ್ರಮ ನಿರ್ವಹಿಸಿದರು.

ನೂತನ ಸದಸ್ಯೆಗೆ ಸ್ವಾಗತ:
ಕ್ಲಬ್‌ಗೆ ನೂತನ ಸದಸ್ಯೆಯಾಗಿ ಸಏರ್ಪಡೆಗೊಂಡ ವತ್ಸಲಾ ಪದ್ಮನಾಭ ಶೆಟ್ಟಿರವರನ್ನು ಹೂ ನೀಡಿ ಜಿಲ್ಲಾಧ್ಯಕ್ಷೆ ಅಧಿಕೃತವಾಗಿ ಕ್ಲಬ್‌ಗೆ ಸೇರ್ಪಡೆಗೊಳಿಸಿದರು. ಸದಸ್ಯೆ ಶೋಭಾ ಕೊಳತ್ತಾಯ ನೂತನ ಸದಸ್ಯೆಯನ್ನು ಪರಿಚಯಿಸಿದರು.
ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ರಾಜೇಶ್ವರಿ ಆಚಾರ್, ಕಾರ್ಯದರ್ಶಿ ಸಂಧ್ಯಾ ಸಾಯ, ಉಪಾಧ್ಯಕ್ಷೆ ಮನೋರಮ ಸೂರ್ಯ, ಕೋಶಾಧಿಖಾರಿ ಲವ್ಲೀ ಸೂರಜ್ ನಾಯರ್, ಐಎಸ್‌ಒ ವೇದ ಲಕ್ಷ್ಮೀಕಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಮೂಲಕ ಪುತ್ತೂರು ರಾಮಕೃಷ್ಣ ಸೇವಾಶ್ರಮಕ್ಕೆ ರೂ.10ಸಾವಿರ ದೇಣಿಗೆ ನೀಡಿದ ಹಿರಿಯರಾದ ಕೆ.ಆರ್.ಶೆಣೈರವರನ್ನು ಗೂ ನೀಡಿ ಗೌರವಿಸಲಾಯಿತು. ಹಿರಿಯ ಸದಸ್ಯೆ ಪುಷ್ಪ ಕೆ.ಪಿ.ರವರನ್ನು ಗೌರವಿಸಲಾಯಿತು. ಆಗಷ್ಟ್ ತಿಂಗಳಿನಲ್ಲಿ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಆಚರಿಕೊಳ್ಳುತ್ತಿರುವ ಕ್ಲಬ್ ಸದಸ್ಯೆಯರನ್ನು ಕಿರು ಕಾಣಿಕೆ ನೀಡಿ ಶುಭಾಶಯ ಕೋರಲಾಯಿತು.ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್‌ರವರನ್ನು ಕ್ಲಬ್ ಅಧ್ಯಕ್ಷೆ ರೂಪಲೇಖರವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಕಾರ್ಯದರ್ಶಿ ಸಂಧ್ಯಾಸಾಯ ವರದಿ ವಾಚಿಸಿದರು. ಮೈತ್ರೈಯಿ ಗುರುಕುಲದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸದಸ್ಯೆ ಸಜನಿ ಇನ್ನರ್‌ವೀಲ್ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷೆ ಮನೋರಮಾ ಸೂರ್ಯ ವಂದಿಸಿದರು. ಸದಸ್ಯೆಯರಾದ ವಚನಾ ಜಯರಾಮ ಹಾಗೂ ಅಶ್ವಿನಿಕೃಷ್ಣ ಮುಳಿಯ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಧ್ಯಕ್ಷೆ ಕ್ಲಬ್‌ನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ವಿವಿಧ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಇನ್ನರ್‌ವೀಲ್ ಕ್ಲಬ್ ಸದಸ್ಯರು ಭಾಗವಹಿಸಿದ್ದರು. ಬಳಿಕ ಸಹಭೋಜನ ನಡೆಯಿತು.

ಮೈತ್ರೈಯಿ ಗುರುಕುಲಕ್ಕೆ ಗೌರವ ಸನ್ಮಾನ
32ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ವಿಟ್ಲ ಮೈತ್ರೈಯಿ ಗುರುಕುಲ ಸಂಸ್ಥೆಯನ್ನು ಇನ್ನರ್‌ಕ್ಲಬ್ ವತಿಯಿಂದ ಗೌರವಿಸಲಾಯಿತು. ಗುರುಕುಲದ ಮಾತೃಶ್ರೀ ಹಾಗೂ ಕಾರ್ಯಾಲಯದ ಕಾರ್ಯದರ್ಶಿಯೂ ಆದ ಸಾವಿತ್ರಿ ಭಗಿನಿರವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗುರುಕುಲದ 5 ಮಂದಿ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.
7 ವೀಲ್‌ಚಯರ್, 2 ಎರಡು ಟೇಬಲ್ ವಿತರಣೆ
ಕ್ಲಬ್ ವತಿಯಿಂದ 7 ವೀಲ್‌ಚಯರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. 2 ವೀಲ್‌ಚಯರ್‌ಗಳನ್ನು ನೇರ ಫಲಾನುಭವಿಗಳಾದ ಶೇಷಪ್ಪ ಹಾಗೂ ಸಾವಿತ್ರಿ ಜಾಲ್ಸೂರು ಎಂಬವರಿಗೆ ವಿತರಿಸಲಾಯಿತು. ಉಳಿದ ೫ ವೀಲ್‌ಚಯರ್‌ಗಳನ್ನು ಸೇವಾಭಾರತಿ ಸಂಸ್ಥೆಗೆ ಕೊಡುಗೆಯಾಗಿ ನೀಡಲಾಯಿತು. ಕ್ಲಬ್ ಪದಾಧಿಕಾರಿ ಹಾಗೂ ನಿರ್ದೇಶಕರ ಪ್ರಾಯೋಜಕತ್ವದಲ್ಲಿ ವೀಲ್‌ಚಯರ್ ನೀಡಿದ್ದರು. ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಟೇಬಲ್‌ಗಳನ್ನು ಕೊಡುಗೆಯಾಗಿ ನೀಡಲಿದ್ದು ಸಾಂಕೇತಿಕವಾಗಿ ವಿತರಿಸಲಾಯಿತು.