ಉಪ್ಪಿನಂಗಡಿ: ಇಲ್ಲಿನ 34ನೇ ನೆಕ್ಕಿಲಾಡಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಅರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಗುರು ರಾಯರಿಗೆ ಆದಿತ್ಯವಾರದಿಂದ ಮೊದಲುಗೊಂಡು ಮೂರು ದಿನಗಳ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಲಿವೆ.
ಆದಿತ್ಯವಾರ ಮಧೂರು ನಾರಾಯಣ ಸರಳಾಯ ಅವರಿಂದ ದಾಸವಾಣಿ, ವಿಶೇಷ ರಂಗಪೂಜೆ, ತೊಟ್ಟಿಲು ಸೇವೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾಸೇವೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸೋಮವಾರದಂದು ಶ್ರೀ ಗುರು ರಾಯರಿಗೆ ಪಂಚಾಮೃತ ಅಭಿಷೇಕ, ಮಹಾಪೂಜೆ ಅನ್ನ ಸಂತರ್ಪಣೆಯು ನಡೆದು ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆಯು ನಡೆಯಿತು.
ಈ ಸಂದರ್ಭದಲ್ಲಿ ಮಠದ ಅದ್ಯಕ್ಷ ಕೆ. ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್. ಗೋಪಾಲ ಹೆಗ್ಡೆ, ಟ್ರಸ್ಟಿಗಳಾದ ಧನ್ಯ ಕುಮಾರ್ ರೈ, ಹರೀಶ ಉಪಾದ್ಯಾಯ, ಹರೀಶ್ ನಾಯಕ್ , ದಮಯಂತಿ ಶೆಟ್ಟಿ , ಶಿವಪ್ರಸಾದ್ , ಶಾಂತಾರಾಮ ಕಾಂಚನ , ಪದಾಧಿಕಾರಿಗಳಾದ ಶ್ರೀನಿಧಿ ಉಪಾಧ್ಯಾಯ , ಶ್ರೀವತ್ಸ ಉಪಾಧ್ಯಾಯ ,ಐ. ಚಿದಾನಂದ ನಾಯಕ್ , ಪ್ರಶಾಂತ್. ಎನ್, ಸದಾನಂದ, ದೇವಿಪ್ರಸಾದ್ ಶೆಟ್ಟಿ, ವಿನಯ್ ಕುಮಾರ್, ಕೀರ್ತನ್ ಶೆಟ್ಟಿ, ಪ್ರಶಾಂತ್ ನೆಕ್ಕಿಲಾಡಿ, ಭವನೇಶ್ವರಿ, ವೈಶಾಲಿ ಕುಂದರ್, ಸ್ವರ್ಣೇಶ್ ಗಾಣಿಗ, ವಸುಧಾ ಉಪಾದ್ಯಾಯ , ಕೆ. ಸತೀಶ್ ಕಿಣಿ, ಪಿ. ಹರೀಶ್ ಪೈ, ಗೋಕುಲ್ ವಾಸುಭಟ್, ಕರಾಯ ಗಣೇಶ ನಾಯಕ್, ರವಿಂದ್ರ ಭಟ್, ಸುಂದರ ಆದರ್ಶನಗರ , ವಾಮನ ಉಬಾರ್, ಗುಣಕರ ಅಗ್ನಾಡಿ , ಕೈಲಾರ್ ರಾಜಗೋಪಾಲ ಭಟ್ , ಶರತ್ ಕೋಟೆ, ಪ್ರೇಮಲತಾ ಕಾಂಚನ ಮತ್ತಿತರರು ಉಪಸ್ಥಿತರಿದ್ದರು.
ಮಠದ ಪುರೋಹಿತರಾದ ಸತ್ಯನಾರಾಯಣ ಬಳ್ಳಕ್ಕುರಾಯ, ರಾಘವೇಂದ್ರ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.