ಕಡಬ: ಸಂತ ಜಾರ್ಜ್ ಪ್ರೌಢಶಾಲೆ ಕುಂತೂರು ಪದವು ಇಲ್ಲಿ ನಶಮುಕ್ತ ಭಾರತ ಅಭಿಯಾನ ಯೋಜನೆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಪೆರಾಬೆ ಗ್ರಾಮ ಪಂಚಾಯತ್ ಗ್ರಾಮೀಣ ವಿಕಲಚೇತನ ಪುರ್ನವಸತಿ ಕಾರ್ಯಕರ್ತರಾದ ಮುತ್ತಪ್ಪ(V.R.W) ಉಪಸ್ಥಿತರಿದ್ದರು. ಶಾಲಾ ಮುಖ್ಯಗುರುಗಳು, ಅಧ್ಯಾಪಕವೃಂದ, 34 ಬಾಲಕಿಯರು, 64 ಬಾಲಕರು ಉಪಸ್ಥಿತರಿದ್ದರು.