ಅಖಂಡ ಭಾರತ ಸಂಕಲ್ಪದ ಅಂಗವಾಗಿ ಪಂಜಿನ ಮೆರವಣಿಗೆ

0

ಪುತ್ತೂರು: ಗಡಿಯಲ್ಲಿ ಸೈನಿಕರ ಪ್ರಾರ್ಣಾಪಣೆಗೆ ಬೆಲೆ ಬರಬೇಕಾದರೆ ಜೀವನಲ್ಲಿ ಬದಲಾವಣೆಯಾಗಬೆಕು. ಪ್ರತಿ ಭಾರತಿಯರ ನಡವಳಿಕೆ ಮೂಲಕ ಬದಲಾಗಬೇಕು. ಕೆಟ್ಟ ಕೆಟ್ಟ ವ್ಯವಹಾರಗಳ ಮೂಲಕ ಧರ್ಮ, ದೇಶಕ್ಕೆ ದಕ್ಕೆ ತರುವವರ ಜೊತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಆತ್ಮ ವಿಸ್ಮೃತಿಯಿಲ್ಲದೆ ಎಚ್ಚೆತ್ತುಕೊಳ್ಳದಿದ್ದರೆ ದೇಶ ಉಳಿಯಲು ಸಾಧ್ಯವಿಲ್ಲ. ನಮಗಾಗಿ ಬಲಿದಾನಗೈದ ಸೈನಿಕರ ರಕ್ತದ ಬೆಲೆಯ ಅರಿವಾಗಬೇಕು ಎಂದು ವಿಶ್ವಹಿಂದು ಪರಿಷದ್ ಬಂಟ್ವಾಳ ಪ್ರಖಂಡ ಅಧ್ಯಕ್ಷರಾಗಿರುವ ನ್ಯಾಯವಾದಿ ಪ್ರಸಾದ್ ಕುಮಾರ್ ಬಂಟ್ವಾಳ ಹೇಳಿದರು.


ವಿಶ್ವಹಿಂದು ಪರಿಷದ್ ಬಜರಂಗದಳ, ಹಿಂದು ಜಾಗರಣಾ ವೇದಿಕೆ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಂಗವಾಗಿ ಆ.14ರಂದು ಸಂಜೆ ನಡೆದ ಬೃಹತ್ ಪಂಜಿನ ಮೆರವಣಿಗೆ, ಭಾರತ್ ಮಾತಾ ಪೂಜನಾ ಹಾಗೂ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಮತದ ಕಾರಣಕ್ಕಾಗಿ ದೇಶ ತುಂಡಾಗಿದೆ ಎನ್ನುವುದನ್ನು ಸ್ವತಃ ಅಂಬೇಡ್ಕರ್ ಹೇಳಿದ್ದರು. ದೇಶ ವಿಭಜನೆಯ ಸಂದರ್ಭದಲ್ಲಿ ಭಾರತದಲ್ಲಿದ್ದ ಮುಸ್ಲಿಮರನ್ನು ಕಳುಸಿಕೊಂಡುವಂತೆ ಕೇಳಿದ್ದರು, ಆದರೆ ಕಿಮ್ಮತ್ತಿನ ಬೆಲೆ ನೀಡಿಲ್ಲ. ಪಾಕಿಸ್ಥಾನದಲ್ಲಿ ಲಕ್ಷಾಂತರ ಹಿಂದುಗಳ ಮಾರಣ ಹೋಮ ನಡೆಯಿತು. ಇದನ್ನು ನಮ್ಮ ಇತಿಹಾಸದಲ್ಲಿ ಬದಿಗಿಟ್ಟಿದ್ದಾರೆ. ಇಲ್ಲಿದ್ದ ಮುಸಲ್ಮಾನರನ್ನು ನಾವು ಅಪ್ಪಿಕೊಂಡ ಪರಿಣಾಮ ನಮ್ಮ ಪರಿಸರಲ್ಲಿ ಘಟ ಸರ್ಪಗಳ ದೂರ್ತ ಬೆಳೆಯುತ್ತಿದೆ. ಇದರಿಂದಾಗಿ ಮುಂಬಯಿಯಲ್ಲಿ ಬಾಂಬ್ ದಾಳಿ, ಕೊಯಮತ್ತೂರು, ಬೆಂಗಳೂರು ವಿಜ್ಞಾನ ಭವನ, ಪಾರ್ಲಿಮೆಂಟ್, ನಾರಾಯಣ ಸ್ವಾಮಿ ದೇವಸ್ಥಾನ ಸೇರಿದಂತ ನಾನಾ ದಾಳಿಗಳಾಗಿದ್ದರೂ ಇದ್ಯಾವುದಕ್ಕೂ ಉತ್ತರ ಕೊಡಲಿಲ್ಲ. ಆದರೆ ಈ ನೆಲವನ್ನು ತಾಯಿ ಎಂದು ಸ್ವೀಕರಸಿದವರು ಪ್ರದಾನಿಯಾದ ಬಳಿಕ ದೇಶದ ಅಸ್ಮಿತೆ ಭದ್ರವಾಗಿದೆ. ಎಲ್ಲಾ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ದೇಶದ ಮೂಲ ಅಸ್ಮಿತೆಯಾಗಿದ್ದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಕಾಶ್ಮೀರದಲ್ಲಿ 370 ರದ್ದು ಮಾಡಿದರು. ದೇಶಕ್ಕಾಗಿ ದುಡಿಯುವವರ ಕೈಗೆ ಆಡಲಿತ ದೊರೆತಾಗ ಯಾವ ರೀತಿ ಕೆಲಸ ಬದಲಾಗಬಹುದು ಎಂಬುದು ಅರಿವಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಲೋಕೋಪಯೋಗಿ ಇಲಾಖೆ ಎಂಪೆನಾಲ್ಡ್ ಸ್ಟ್ರಕ್ಚರಲ್ ಇಂಜಿನಿಯರ್ ಪ್ರಸನ್ನ ದರ್ಬೆ ಮಾತನಾಡಿ, ಅಖಂಡವಾಗಿದ್ದ ಭಾರತವನ್ನು 1947ರಲ್ಲಿ ಬ್ರಿಟೀಷ್ ಅಧಿಕಾರಿಯ ಮೂಲಕ ಮೂರು ತುಂಡುಗಳನ್ನಾಗಿ ಮಾಡಿ ಲಕ್ಷಾಂತರ ಹಿಂದುಗಳ ಮಾರಣಹೋಮಕ್ಕೆ ಕಾರಣರಾಗಿದ್ದರು. ಈಗ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಕನಸುಗಳನ್ನು ಪ್ರತ್ಯೇಕಿಸುವ ಕೆಲಸವಾಗುತ್ತಿದ್ದು ಯುವ ಜನತೆ ಅದಕ್ಕೆ ಬಲಿಯಾಗಬಾರದು. ಅಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ನೀಡಿದ ದಿಟ್ಟ ಉತ್ತರ ಪಾಶ್ಚಾತ್ಯ ಶಕ್ತಿಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಮೇರಿಕಾ ಅಧ್ಯಕ್ಷರ ನಡವಳಿಕೆಯೂ ಬದಲಾಗುವಂತೆ ಮಾಡಿದೆ ಎಂದರು.


ಸನ್ಮಾನ
ಮಾಜಿ ಯೋಧರಾದ ವಸಂತ ಗೌಡ ಹಾಗೂ ಪದ್ಮನಾಭ ಗೌಡ ಮಳುವೇಲು ಅವರ ಪರವಾಗಿ ಪತ್ನಿ ರವರನ್ನು ಸನ್ಮಾನಿಸಲಾಯಿತು.


ಪಂಜಿನ ಮೆರವಣಿಗೆ:
ಬೊಳುವಾರು ಓಂಶ್ರೀಶಕ್ತಿ ಆಂಜನೇಯ ಮಂತ್ರಾಲಯದ ಬಳಿಯಿಂದ ಹೊರಟ ಪಂಜಿನ ಮೆರವಣಿಗೆಗೆ ಆದರ್ಶ ಆಸ್ಪತ್ರೆಯ ವೈದ್ಯ ಡಾ.ಎಂ.ಕೆ ಪ್ರಸಾದ್‌ರವರು ಜಿಲ್ಲಾ ಸಹ ಸಂಯೋಜಕ ದಿನೇಶ್ ಪಂಜಿಗ ಹಾಗೂ ಬಜರಂಗದಳದ ನಗರ ಪ್ರಖಂಡ ಸಂಯೋಜಕ ಜಯಂತ ಕುಂಜೂರುಪಂಜರವರಿಗೆ ದೊಂದಿ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ನಂತರ ಬೊಳುವಾರು ಮುಖ್ಯರಸ್ತೆ, ಬಸ್‌ನಿಲ್ದಾಣದ ಬಳಿಯಿಂದಾಗಿ ಕೋರ್ಟ್‌ರಸ್ತೆಯ ಮೂಲಕ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಸಾಗಿಬಂದಿತು.
ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲೂಕು ಸಂಯೋಜಕ ಕೀರ್ತನ್ ಸವಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಮೃದ್ಧಿ ಶೆಣೈ ಪ್ರಾರ್ಥಿಸಿದರು. ಹಿಂದೂ ಜಾಗರಣ ವೇದಿಕೆಯ ಪ್ರಸಾದ್ ಪುರುಷರಕಟ್ಟೆ ಸ್ವಾಗತಿಸಿದರು. ಜಿಲ್ಲಾ ಸಹ ಸಂಯೋಜಕ ದಿನೇಶ್ ಪಂಜಿಗ ಪ್ರತಿಜ್ಞಾ ವಿಧಿ ಬೋಧಿಸಿದರು. ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲಾ ಧರ್ಮ ಪ್ರಸಾರ ಪ್ರಮುಖ್ ವಿಶಾಖ್ ರೈ ಕಾರ್ಯಕ್ರಮ ನಿರೂಪಿಸಿದರು. ಬಜರಂಗದಳದ ನಗರ ಪ್ರಖಂಡ ಸಂಯೋಜಕ ಜಯಂತ ಕುಂಜೂರುಪಂಜ ವಂದಿಸಿದರು.


ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ, ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿರೂಪಾಕ್ಷ ಭಟ್ ಮಚ್ಚಿಮಲೆ, ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಹಿಂದು ಜಾಗರಣ ವೇದಿಕೆಯ ಅಜಿತ್ ರೈ ಹೊಸಮನೆ, ಪ್ರಮುಖರಾದ ಮಾಧವ ಪೂಜಾರಿ, ಜಯಂತ ಶೆಟ್ಟಿ ಕಂಬಳತ್ತಡ್ಡ, ದಾಮೋದರ ಪಾಟಾಳಿ, ಶ್ರೀಧರ ತೆಂಕಿಲ, ಸೀತಾರಾಮ ರೈ ಕೆದಂಬಾಡಿ, ರಾಜೇಶ್ ಬನ್ನೂರು, ಯವರಾಜ್ ಪೆರಿಯತ್ತೋಡಿ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ರಮೇಶ್ ಪಜಿಮಣ್ಣು, ವಿನಯ ಕಲ್ಲೇಗ, ರಾಧಾಕೃಷ್ಣ ನಂದಿಲ, ನಾಗೇಶ್ ಟಿ.ಎಸ್., ಸೇಸಪ್ಪ ಗೌಡ ಬೆಳ್ಳಿಪ್ಪಾಡಿ, ಹರಿಪ್ರಸಾದ್ ಯಾದವ್, ತಿಮ್ಮಪ್ಪ ಪೂಜಾರಿ, ಜಯಂತ ಗೌಡ ಕರ್ಕುಂಜ, ವಿಶ್ವನಾಥ ಗೌಡ ಬನ್ನೂರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here