ಕಾಣಿಯೂರು: ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಡಾ. ಉದಯಕುಮಾರ್ ‘ಕುಮಾರ್ ಕ್ಲಿನಿಕ್’ ಕಾಣಿಯೂರು ಇವರು ನೆರವೇರಿಸಿ ಶುಭ ಹಾರೈಸಿದರು.

ಬಳಿಕ ನಡೆದ ಸಭಾಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಈ ರಾಷ್ಟ್ರ ನಾಯಕರು ನಮಗೆ ಮಾರ್ಗದರ್ಶಕರಾಗಿದ್ದು ಅವರ ಆದರ್ಶವನ್ನು ಪಾಲಿಸುತ್ತಾ, ಭಾರತದ ಭವ್ಯ ಪ್ರಜೆಯಾಗಿ ಬಾಳಬೇಕು ಎಂದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿವಿಶ್ ಮುರುಳ್ಯ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ ರಾಷ್ಟ್ರ ಅಭಿಮಾನ ಮತ್ತು ಶ್ರೀ ಕೃಷ್ಣನ ಸಂದೇಶವನ್ನು ತುಲನಾತ್ಮಕವಾಗಿ ಮಕ್ಕಳಿಗೆ ವಿವರಿಸಿದರು. ಚಾರ್ವಕ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಧನಂಜಯ ಕೇನಾಜೆ, ಶಾಲಾ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಹರಿಚರಣ್ ರೈ ಮಾದೋಡಿ, ಸಹ ಆಡಳಿತಾಧಿಕಾರಿ ಹೇಮಾ ನಾಗೇಶ್ ರೈ, ಹಿರಿಯ ಶಿಕ್ಷಕಿ ಸವಿತಾ ಕೆ ಮತ್ತು ವಿದ್ಯಾರ್ಥಿ ನಾಯಕಿ ಪೃಥ್ವಿ ಎಂ ಉಪಸ್ಥಿತರಿದ್ದರು. ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್ ವಂದಿಸಿದರು. ಧ್ವಜಾರೋಹಣದ ಬಳಿಕ ಕಾಣಿಯೂರು ಮುಖ್ಯರಸ್ತೆಯ ಮೂಲಕ ಮೆರವಣಿಗೆ ನಡೆಯಿತು. ಪುಟಾಣಿಗಳು ಸ್ವಾತಂತ್ರ್ಯ ಹೋರಾಟಗಾರರ ವಿವಿಧ ವೇಷಭೂಷಣವನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ನಂತರ ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಂಗ್ಲ ಮಾಧ್ಯಮದ ಸಹ ಮುಖ್ಯಸ್ಥ ಅನಿತಾ ಜೆ ರೈ ಕಾರ್ಯಕ್ರಮ ನಿರೂಪಿಸಿದರು.