ಪುತ್ತೂರು: ಸರಕಾರಿ ಪದವಿಪೂರ್ವ ಕಾಲೇಜು ಬೆಳಿಯೂರು ಕಟ್ಟೆ ಇಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕೆನರಾ ಬ್ಯಾಂಕ್ ಬೆಳಿಯೂರು ಕಟ್ಟೆ ಶಾಖೆಯ ಮ್ಯಾನೇಜರ್ ಹಾಗೂ ಮುಖ್ಯ ಶಿಕ್ಷಕರು ಧ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇತಿಹಾಸ ಉಪನ್ಯಾಸಕಿ ಇಂದಿರಾ ಭಂಡಾರಿ ಕೆ, ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ಶಿಕ್ಷಕಿ ಚಂದ್ರಾವತಿ ಕೆ, ಮುಖ್ಯ ಶಿಕ್ಷಕಿ ಸುನೀತ ಎಂ, ಅಧ್ಯಕ್ಷತೆ ವಹಿಸಿದ್ದ, ಪ್ರಾಂಶುಪಾಲ ಹರಿಪ್ರಕಾಶ್ ಬಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಿಗೆ ಬಹುಮಾನ ನೀಡಲಾಯಿತು.
ಕಾಲೇಜು ವಿದ್ಯಾರ್ಥಿ ನಾಯಕ ಇನಾಜ್ ಸ್ವಾಗತಿಸಿ, 9ನೇ ತರಗತಿ ವಿದ್ಯಾರ್ಥಿನಿ ಮನ್ವಿತ ವಂದಿಸಿದರು. ಕಾಲೇಜು ವಿಭಾಗದ ವಿದ್ಯಾರ್ಥಿನಿ ಭೂಮಿಕ ಕಾರ್ಯಕ್ರಮವನ್ನು ನಿರೂಪಿಸಿದರು.