ಉಪ್ಪಿನಂಗಡಿ: ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಭವ್ಯವಾಗಿ ನೆರವೇರಿತು. ಉದ್ಯಮಿ ಸಚಿನ್ ಸುಂದರ ಗೌಡ ಅರ್ಬಿ ಧ್ವಜಾರೋಹಣ ನೆರವೇರಿಸಿ, “ದೇಶದ ಸ್ವಾತಂತ್ರ್ಯವನ್ನು ಕಾಪಾಡುವಲ್ಲಿ ವಿದ್ಯಾರ್ಥಿಗಳು ಮುಂದಿನ ಯುವ ಪೀಳಿಗೆಯಲ್ಲಿ ಜೀವನ ನಿರ್ವಹಣೆಯೊಂದಿಗೆ ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಶುಭಹಾರೈಸಿದರು.
ಸಂಸ್ಥೆಯ ಪರಿವೀಕ್ಷಕರಾದ ಬಾಲಕೃಷ್ಣ ಬಿ.ಟಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶಭಕ್ತರ ತ್ಯಾಗ–ಬಲಿದಾನ ಹಾಗೂ ಬ್ರಿಟಿಷರ ಆಳ್ವಿಕೆಯಲ್ಲಿದ್ದ ದುರವಸ್ಥೆಯನ್ನು ವಿವರಿಸಿದರು. ಭಾವಿಭವಿಷ್ಯದಲ್ಲಿ ವಿದ್ಯಾರ್ಥಿಗಳು ದೇಶಸೇವೆ ಯಲ್ಲಿ ತೊಡಗಿಸಿಕೊಳ್ಳ ಬೇಕೆಂದು ಶುಭಹಾರೈಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಶೀನಪ್ಪಗೌಡ ಬೊಳ್ಳಾವು, ಸದಸ್ಯರಾದ ಬಾಬು ಅಗರಿ, ಶೇಷಪ್ಪಗೌಡ ಬೊಳ್ಳಾವು, ಗೀತಾ ಕಂಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
2024ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರತಿಭೆ ತೋರಿದ ವಿದ್ಯಾರ್ಥಿಗಳನ್ನು ಶೀನಪ್ಪಗೌಡ ಬೊಳ್ಳಾವು ಹಾಗೂ ರಾಮಚಂದ್ರಗೌಡ ನೆಡ್ಚಿಲ್ ಇವರ ಪ್ರಾಯೋಜಕತ್ವದಲ್ಲಿ ಸನ್ಮಾನಿಸಲಾಯಿತು. ಶಿಕ್ಷಕಿ ಭವ್ಯ ವೈ ಸ್ವಾತಂತ್ರ್ಯದ ಮಹತ್ವವನ್ನು ವಿವರಿಸಿದರು. ಮುಖ್ಯಗುರು ಲಕ್ಷ್ಮಿ ಪಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಶಿಕ್ಷಕಿ ಶಕುಂತಲಾ ಕೆ ವಂದಿಸಿದರು. ಶಿಕ್ಷಕರಾದ ಸವಿತಾ ಪಿ.ಸಿ., ಮೋಹನ್ ಹೆಚ್., ಡೊಂಬಯಗೌಡ ಸಹಕರಿಸಿ, ಶಿಕ್ಷಕಿ ನಿತ್ಯಾ ಬಿ ಕಾರ್ಯಕ್ರಮವನ್ನು ನಿರೂಪಿಸಿದರು.