ಬಡಗನ್ನೂರು : ಬಡಗನ್ನೂರು ಇಲ್ಲಿನ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಬಡಗನ್ನೂರು ಗ್ರಾ.ಪಂ ವತಿಯಿಂದ ನರೇಗಾ ಯೋಜನೆಯಡಿ 4 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ನೂತನ ಶೌಚಾಲಯ ಉದ್ಘಾಟನಾ ಕಾರ್ಯಕ್ರಮ ಆ.15 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾ. ಪಂ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡು ಬಾಲಕಿಯರ ಶೌಚಾಲಯವನ್ನು ಉದ್ಘಾಟಿಸಿದರು.
ಗ್ರಾ.ಪಂ ಸದಸ್ಯ ಸಂತೋಷ ಆಳ್ವ ರವರು ಬಾಲಕರ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿ , ಈಗಾಗಲೇ ಶಾಲೆಗೆ ಹೆಚ್ಚಿನ ಅನುದಾನವನ್ನು ನೀಡಿದ್ದು,ಗ್ರಾಮ ಪಂಚಾಯತ್ ವತಿಯಿಂದ ಸಾಧ್ಯವಾದಷ್ಟು ಅನುದಾನವನ್ನು ನೀಡಿ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತೇವೆ ಎಂದರು.
ಗ್ರಾಪಂ ನಿಂದ 50 ಸಾವಿರ ರೂಪಾಯಿ ಅನುದಾನದಲ್ಲಿ ನೀಡಲಾದ ನೀರಿನ ಸಂಗ್ರಹಣಾ ಟ್ಯಾಂಕನ್ನು ಪ್ರಗತಿಪರ ಕೃಷಿಕ ಜಯಂತ ರೈ ಕುದ್ಕಾಡಿ ರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ರವಿರಾಜ ರೈ ಸಜಂಕಾಡಿ, ಸುಜಾತ, ವೆಂಕಟೇಶ ಕನ್ನಡ್ಕ , ಧರ್ಮೇಂದ್ರ ಪದಡ್ಕ, ರವಿಚಂದ್ರ ಸಾರೆಪ್ಪಾಡಿ, ಶ್ರೀಮತಿ ಕನ್ನಡ್ಕ, ದಮಯಂತಿ ಕೆಮನಡ್ಕ, ಕುಮಾರ ಅಂಬಟೆಮೂಲೆ, ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಕೆ. ಪಿ ಸುಬ್ಬಯ್ಯ, ಕೃಷ್ಣ ರೈ ಕುದ್ಕಾಡಿ, ನಿವೃತ್ತ ಗುರುಗಳಾದ ಶಂಕರಿ ನಾರಾಯಣ ಪಾಟಾಳಿ ಪಟ್ಟೆ, ಹರಿಣಾಕ್ಷಿ ಎ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನಾರಾಯಣ ರೖೆ ಕುದ್ಕಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡಗನ್ನೂರು ಒಕ್ಕೂಟ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ, ಎಸ್ ಡಿ. ಎಂ, ಸಿ ಅಧ್ಯಕ್ಷ ಗಿರೀಶ್ ಗೌಡ, ಉಪಾಧ್ಯಕ್ಷೆ ಸುಲೋಚನ ನೇರ್ಲಂಪಾಡಿ, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹಾಲಿಂಗ ಪಾಟಾಳಿ ಕುದ್ಕಾಡಿ, ಬಾಬು ಮೂಲ್ಯ ಮೖೆಂದನಡ್ಕ, ಎಸ್.ಡಿ.ಎಂ ಸಿ ಸದಸ್ಯರಾದ ಲತಾ ಕಟ್ಟಾವು, ರೈಹಾನ ಎಸ್ ಎಮ್, ಕಾವ್ಯ, ಸುನೀತಾ, ಚಂದ್ರಿಕಾ, ಪೌಝಿಯಾ, ಸಾವಿತ್ರಿ ಬಿ, ಶೋಭಾ, ಉಷಾಲತಾ, ಗುತ್ತಿಗೆಗಾರ ತಿಮ್ಮಪ್ಪ ಪಾಟಾಳಿ, ಸುಬ್ರಾಯ ನಾಯಕ್, ಅಬ್ದುಲ್ ಕುಂಞಿ, ಪಕೀರ ಎಂ, ಕೋಟಿ ಚೆನ್ನಯ್ಯ ಯುವಕ ಮಂಡಲ ಸದಸ್ಯರು, ಪಂಚಾಯತ್ ಸಿಬ್ಬಂದಿ ವರ್ಗದವರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಭಾರ ಮುಖ್ಯ ಗುರುಗಳಾದ ವಿಜಯಲಕ್ಷ್ಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಪಳ್ಳತ್ತಾರು ವಂದಿಸಿದರು. ಶಿಕ್ಷಕಿಯರಾದ ಮಧುಶ್ರೀ, ಚೈತ್ರ, ಸೌಮ್ಯ, ಸರಿತಾ, ಶಶಿಕಲಾ ಸಹಕರಿಸಿದರು.