ಕುಂಬ್ರ ಪ್ರಾ.ಕೃ.ಪ.ಸಹಕಾರ ಸಂಘದ ಸುಳ್ಯಪದವು ಶಾಖೆ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸುಳ್ಯಪದವುನಲ್ಲಿ ಪ್ರಾರಂಭಗೊಳ್ಳಲಿರುವ ನೂತನ ಶಾಖಾ ಕಟ್ಟಡ ಪ್ರಕೃತಿ ಸಹಕಾರ ಸೌಧದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಆ.17ರಂದು ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರಲ್ಲಿ ಬಿಡುಗಡೆಗೊಳಿಸಲಾಯಿತು.


ಆಮಂತ್ರಣ ಬಿಡುಗಡೆ ಮಾಡಿದ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಅನುಕೂಲಾಗುವಂತೆ ನೂತನ ಶಾಖೆಯಲ್ಲಿ ಪ್ರಧಾನ ಕಚೇರಿಯಲ್ಲಿರುವಂತೆ ಬ್ಯಾಂಕಿಂಗ್ ವ್ಯವಹಾರ, ನ್ಯಾಯಬೆಲೆ ಅಂಗಡಿ, ರಸಗೊಬ್ಬರ ಗೋದಾಮು ಸೇರಿದಂತೆ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿದೆ. ಸಹಕಾರಿ ಬಂಧುಗಳು ಇದರ ಸಧುಪಯೋಗವನ್ನು ಪಡೆದುಕೊಳ್ಳುಂತೆ ತಿಳಿಸಿ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಹಕಾರಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮನ್ನು ಯಶಸ್ವಿಗೊಳಿಸುವಂತೆ ಅವರು ವಿನಂತಿಸಿದರು.


ಉಪಾಧ್ಯಕ್ಷ ಸೂರ್ಯನಾರಾಯಣ ಭಟ್, ನಿರ್ದೇಶಕರಾದ ರಾಜೀವಿ ಎಸ್.ರೈ ಕುಂಬ್ರ, ಮಲ್ಲಿಕಾ ಎ.ಜೆ ಆಲಂತಡ್ಕ, ಸಂತೋಷ್ ಆಳ್ವ ಎ.ಸಿ ಗಿರಿನಿಲಯ, ಶ್ರೀನಿವಾಸ್ ಪ್ರಸಾದ್ ಮುಡಾಲ, ಮುಖ್ಯ ಕಾರ್ಯನಿರ್ವಹಣಾಧಿಕಾಇ ಭವಾನಿ ಬಿ.ಆರ್., ಮಾಜಿ ನಿರ್ದೇಶಕ ರಘುರಾಮ ಪಾಟಾಳಿ, ಬಡಗನ್ನೂರು ಗ್ರಾ.ಪಂ ಸದಸ್ಯ ಕೆ.ವೆಂಕಟೇಶ್ ಕನ್ನಡ್ಕ, ಮಾಜಿ ಉಪಾಧ್ಯಕ್ಷ ಗಂಗಾಧರ ರೈ, ಮಾಧ ನಾಯಕ್ ಸುಳ್ಯಪದವು, ಅನಿಲ್ ಕುಮಾರ್ ಕನ್ನಡ್ಕ ಶ್ರೀಧರ ಪೂಜಾರಿ, ರುಕ್ಮಾಂಗದ, ವಿಶ್ವಂಭರ ಕನ್ನಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here