ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ಮಾಡಾವು ಸರ್ಕಲ್ ವತಿಯಿಂದ ಅಮ್ಚಿನಡ್ಕ ಬದಿಯಡ್ಕ ಮದರಸ ಸಭಾಂಗಣದಲ್ಲಿ ಸರ್ಕಲ್ ಅಧ್ಯಕ್ಷ ಎಂ.ಎಂ ಅಬೂಬಕರ್ ಹಾಜಿ ಮಾಡಾವು ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ಸೌಹಾರ್ದ ಸಂಗಮವು ನಡೆಯಿತು. ಅಬ್ದುಲ್ ಹಮೀದ್ ಮದನಿ ಮಾಡಾವು ಪ್ರಾರ್ಥಿಸಿದರು.
ಕೆಎಂಜೆ ಪುತ್ತೂರು ಝೋನ್ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ಕುಂಬ್ರ ಸಭೆ ಉದ್ಘಾಟಿಸಿ ಮಾತನಾಡಿದರು. ಅತಿಥಿಯಾಗಿ ಆಗಮಿಸಿದ ಕೊಂಬೆಟ್ಟು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಪುಡಾ ಅಧ್ಯಕ್ಷ ರಾಮಚಂದ್ರ ಅಮಳ, ಕೆಯ್ಯೂರು ಕೆಪಿಎಸ್ ಶಾಲಾ ಉಪನ್ಯಾಸಕ ಇಸ್ಮಾಯಿಲ್ ಮಾಸ್ಟರ್ ಸೌಹಾರ್ದ ಭಾರತದ ಬಗ್ಗೆ ಮಾತನಾಡಿದರು.
ಸುನಿಲ್ ಡಿಸೋಜಾ ನೂಜಿ, ಹಸೈನಾರ್ ಬಿ ಎಂ, ಅಮ್ಚಿನಡ್ಕ ಎಸ್ವೈಎಸ್ ದ.ಕ ಈಸ್ಟ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಚೆನ್ನಾರ್ ಮೊದಲಾದವರು ಶುಭ ಹಾರೈಸಿದರು.
ಭವ್ಯ ಭಾರತವು ಹಿಂದೆ ಹೇಗಿತ್ತು, ಈಗ ಹೇಗಿದೆ, ಮುಂದೆ ಏನಾಗಬೇಕೆಂಬ ಚರ್ಚಾ ವೇದಿಕೆಯಾಗಿತ್ತು, ಅಲ್ಲದೇ ಸೌಹಾರ್ದ ಚಹಾ ಕೂಟ ಏರ್ಪಡಿಸಲಾಗಿತ್ತು. ಎಸ್ವೈಎಸ್ ಪುತ್ತೂರು ಝೋನ್ ಉಪಾಧ್ಯಕ್ಷ ಪವಾಝ್ ಕಟ್ಟತ್ತಾರು, ಇಬ್ರಾಹಿಂ ಹಾಜಿ ಫ್ಯಾಮಿಲಿ, ಉಮರ್ ಹಾಜಿ ಕಟ್ಟತ್ತಾರು, ಹುಸೈನ್ ಮುಸ್ಲಿಯಾರ್, ಮೂಸ ಕಂಞಿ ಅಮ್ಚಿನಡ್ಕ, ಅಬ್ದುಲ್ ಖಾದರ್ ಚೆನ್ನಾರ್, ಅಬ್ಬಾಸ್ ಚೆನ್ನಾರ್, ಅಬ್ದುಲ್ ರಹಿಮಾನ್ ಸಖಾಫಿ ಅಮ್ಚಿನಡ್ಕ, ಎಸ್ ವೈಎಸ್ ಮಾಡಾವು ಸರ್ಕಲ್ ಉಪಾಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್ ಅಮ್ಚಿನಡ್ಕ, ಸಂಘಟನಾ ಕಾರ್ಯದರ್ಶಿ ನಾಸಿರ್ ಸಖಾಫಿ ಕಟ್ಟತ್ತಾರು, ಅಬೂಬಕ್ಕರ್ ನಿಡ್ಯಾಣ, ಸತ್ತಾರ್ ಚೆನ್ನಾರ್, ಕೆಸಿಎಫ್ ಸಂಘಟಕ ಅಮೀನ್ ಸಅದಿ ಝುಹ್ರಿ ಚೆನ್ನಾರ್, ಮಹಮ್ಮದ್ ಕುಂಡಡ್ಕ, ಅಬೂಬಕ್ಕರ್ ಸಖಾಫಿ ಕೊಳ್ತಿಗೆ, ಅಲೀ ಮುಸ್ಲಿಯಾರ್ ಎಂ, ಕೆ ಇಬ್ರಾಹಿಂ ಮುಸ್ಲಿಯಾರ್, ಪುತ್ತುಕುಂಞಿ ಹಾಜಿ, ಅಬ್ದುಲ್ ರಝಾಕ್ ಸಿ ಎಂ, ಸಿದ್ದೀಕ್ ಅಮ್ಚಿನಡ್ಕ, ಹಂಝ ಅರಿಕ್ಕಿಲ, ಸತ್ತಾರ್ ಅರಿಕ್ಕಿಲ, ಖಾದರ್ ಹಾಜಿ, ಅಬ್ದುಲ್ ಖಾದರ್ ಅಮ್ಚಿನಡ್ಕ, ಎಸ್ವೈಎಸ್ ಕೋಶಾಧಿಕಾರಿ ಮುಹಮ್ಮದ್ ಕುಂಡಡ್ಕ, ಸತ್ತಾರ್ ಅರಿಕ್ಕಿಲ ಮೊದಲಾದವರು ಉಪಸ್ಥಿತರಿದ್ದರು . ಸರ್ಕಲ್ ಸಂಘಟನಾ ಕಾರ್ಯದರ್ಶಿ ಹಂಝ ಲತೀಫೀ ಸ್ವಾಗತಿಸಿ ಸರ್ಕಲ್ ಪ್ರ .ಕಾರ್ಯದರ್ಶಿ ಮಹಮ್ಮದ್ ಬಾಯಂಬಾಡಿ ವಂದಿಸಿದರು.