ಪುತ್ತೂರು : ಬಲ್ನಾಡು ಗ್ರಾಮದ ಕಲ್ಲಾಜೆ ನಿವಾಸಿ, ಕುಕ್ಕಪ್ಪ ಗೌಡ (80)ರವರು ಆ.18 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧರಾದರು. ಮೃತರು ಪತ್ನಿ ಸೇಸಮ್ಮ ಮತ್ತು ಆರು ಮಂದಿ ಮಕ್ಕಳನ್ನು ಅಗಲಿದ್ದಾರೆ.
ಇವರು 1962 ರಿಂದ 2019 ರವರೆಗೆ 52 ವರ್ಷಗಳಿಂದ ಬಲ್ನಾಡು ಶ್ರೀ ದಂಡನಾಯಕ ಉಲ್ಲಾಳ್ತಿ ದೈವಸ್ಥಾನದಲ್ಲಿ ಮೂಲ ಪರಿಚಾರಕಾರಗಿಯೂ ಸೇವೆ ಸಲ್ಲಿಸಿದ್ದರು ಮತ್ತು ದೈವಗಳ ಸ್ವಗದ್ದೆಯಲ್ಲಿ ಚೆಂಡು ಕುಟ್ಟುವ ಸೇವೆ, ಒಲಿ ಕೊಡೆ ಹಿಡಿಯುವ ಸೇವೆಯನ್ನು ನಿರ್ವಹಿಸಿದ್ದರು ಹಾಗೂ 25 ವರ್ಷಗಳಿಂದ ಬಲ್ನಾಡು ಗ್ರಾಮ ಪಂಚಾಯತಿಯ ಉಜಿರುಪಾದೆ ವಠಾರದ ನೀರು ಸರಬರಾಜು ನಿರ್ವಹಕರಾಗಿಯು ಕಾರ್ಯ ನಿರ್ವಹಿಸಿದ್ದರು.