ಉಪ್ಪಿನಂಗಡಿ: ಧರ್ಮಣ್ಣ ನಾಯ್ಕ ನಿಧನ

0

ಉಪ್ಪಿನಂಗಡಿ: ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘ(ನಿ)ದ ರಸಗೊಬ್ಬರ ಮಾರಾಟ ಮಳಿಗೆಯ ಉದ್ಯೋಗಿ ಧರ್ಮಣ್ಣ ನಾಯ್ಕ (58) ಎಂಬವರು ಕೆಲ ಸಮಯದ ಅನಾರೋಗ್ಯದಿಂದ ಸೋಮವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಇಳಂತಿಲ ಗ್ರಾಮದ ಪಾರಡ್ಕ ನಿವಾಸಿಯಾಗಿರುವ ಇವರು ತಂದೆ, ತಾಯಿ, ಪತ್ನಿ, ಓರ್ವ ಪುತ್ರ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮೃತರ ಗೌರವಾರ್ಥ ಸಹಕಾರಿ ಸಂಘದ ವ್ಯವಹಾರವನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಯಿತು. ಸಂಘದ ಅಧ್ಯಕ್ಷ ಸುನಿಲ್‌ ಕುಮಾರ್ ದಡ್ಡು ಸಹಿತ ನಿರ್ದೇಶಕರು, ಸಿಬ್ಬಂದಿಯು ಮೃತರ ಅಂತಿಮ ದರ್ಶನಗೈದರು.

LEAVE A REPLY

Please enter your comment!
Please enter your name here