ರೋಟರಿ ಪುತ್ತೂರು ಸೆಂಟ್ರಲ್ ನಿಂದ ಕಂಪ್ಯೂಟರೀಕೃತ ಉಚಿತ ನೇತ್ರ ಚಿಕಿತ್ಸಾ ಶಿಬಿರ

0

ಪುತ್ತೂರು: ಪೆರ್ಲಂಪಾಡಿ ಷಣ್ಮುಖದೇವ ಅನುದಾನಿತ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ವತಿಯಿಂದ ಸ್ಟಾರ್ ಆಪ್ಟಿಕಲ್ಸ್ ರವರ ಸಹಕಾರದಲ್ಲಿ ಆ.21 ರಂದು ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಮಾಜಿ ಸಹಾಯಕ ಗವರ್ನರ್ ಶ್ಯಾಮಸುಂದರ ರೈ ನೆರವೇರಿಸಿ, ರೋಟರಿಯ ಸೇವಾ ಯೋಜನೆಗಳು ಗ್ರಾಮೀಣ ಪ್ರದೇಶಗಳಿಗೆ ತಲುಪುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದರು.

ಶಾಲಾ ಸಂಚಾಲಕರಾದ ಶಿವರಾಂ ಭಟ್ ರವರು ಮಾತನಾಡಿ, ಈ ಒಂದು ಮಹತ್ತರವಾದ ಯೋಜನೆಯನ್ನು ನಮ್ಮ ಸಂಸ್ಥೆಯಲ್ಲಿ ನಡೆಸಿದ್ದಕ್ಕಾಗಿ ರೋಟರಿ ಸೆಂಟ್ರಲ್ ಗೆ ಅಭಿನಂದನೆ ಸಲ್ಲಿಸಿದರು.

ರೋಟರಿ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಚಂದ್ರಹಾಸ ರೈ ಬಿ, ಕಾರ್ಯದರ್ಶಿ ಜಯಪ್ರಕಾಶ್ ಎ ಎಲ್, ರೋಟರಿ ಸೆಂಟ್ರಲ್ ಟ್ರಸ್ಟ್ ಅಧ್ಯಕ್ಷ ಸಂತೋಶ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಅಶ್ರಫ್, ಶಾಲಾ ಆಡಳಿತ ಸಮಿತಿ ಉಪಾಧ್ಯಕ್ಷ ಗಣಪತಿ ಭಟ್, ಕೋಶಾಧಿಕಾರಿ ದಿವಾಕರ ರೈ ಕೆರೆಮೂಲೆ, ರೋಟರಿ ಸೆಂಟ್ರಲ್ ನೂತನ ಸದಸ್ಯ ಈಶ್ವರ ನಾಯಕ್ ರವರು ಉಪಸ್ಥಿತರಿದ್ದರು. ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ರಫೀಕ್ ದರ್ಬೆ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯಶಿಕ್ಷಕ ಕೃಷ್ಣವೇಣಿ ವಂದಿಸಿದರು. 

ಮೊದಲ ಭಾಗವಾಗಿ ಚಿಕಿತ್ಸಾ ಶಿಬಿರ
ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷ ಭಾದಿಸುತ್ತಿರುವ ಬಗ್ಗೆ ಮಾಧ್ಯಮ ಸಮೀಕ್ಷೆ ಗಳಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನ ವಿನೂತನ ಯೋಜನೆ ಹಮ್ಮಿಕೊಂಡಿದ್ದು, ಕಂಪೂಟರೀಕೃತ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಲವು ಶಾಲೆಗಳಲ್ಲಿ ನಡೆಸಲು ತೀರ್ಮಾನಿಸಿತ್ತು. ಆ ಪ್ರಕಾರ ಮೊದಲ ಭಾಗವಾಗಿ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

99 ಕಣ್ಣಿನ ತಪಾಸಣೆ
105 ಮಕ್ಕಳ ಪೈಕಿ ಶಾಲೆಯಲ್ಲಿ ಹಾಜರಿದ್ದ 99 ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆ ನಡೆಸಲಾಯಿತು. ತಪಾಸಣೆಯ 99 ವಿದ್ಯಾರ್ಥಿಗಳ ಪೈಕಿ 15 ಮಕ್ಕಳಲ್ಲಿ ದೃಷ್ಟಿ ದೋಷ ಇರುವುದು ಕಂಡು ಬಂದಿರುತ್ತದೆ. ಸ್ಟಾರ್ ಅಪ್ಪಿಕಲ್ಸ್ ನ ತಪ್ಸೀರ್ ಮತ್ತು ಬಳಗದವರು ತಪಾಸಣಾ ಶಿಬಿರ ನಡೆಸಿಕೊಟ್ಥರು.

LEAVE A REPLY

Please enter your comment!
Please enter your name here