ಪುತ್ತೂರು: ದ.ಕ. ಜಿಲ್ಲೆಯ ಎಂಟು ತಾಲೂಕುಗಳನ್ನು ಒಳಗೊಂಡ ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ದ. ಕ. ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಪುತ್ತೂರಿನ ಕಿರಣ್ ಟೈಲರ್ಸ್ ನ ಮಾಲಕ ಜಯಂತ ಕೆ. ಉರ್ಲಾಂಡಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಆ. 24ರಂದು ಮಂಗಳೂರಿನ ಟೈಲರ್ ಭವನದಲ್ಲಿ ಜಿಲ್ಲಾ ಸಮಿತಿ ಸಂಘದ ಮಾಜಿ ಅಧ್ಯಕ್ಷೆ ವಿದ್ಯಾಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಆಯ್ಕೆ ನಡೆಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಬಂಟ್ವಾಳದ ಈಶ್ವರ್ ಕುಲಾಲ್, ಕೋಶಾಧಿಕಾರಿಯಾಗಿ ಮಂಗಳೂರಿನ ಕೇಶವ ಕದ್ರಿ, ಉಪಾಧ್ಯಕ್ಷರಾಗಿ ವಿಶ್ವನಾಥ್ ಬಜಾಲ್ ಮಂಗಳೂರು, ವೇದಾವತಿ ಬೆಳ್ತಂಗಡಿ, ಲಿಗೋಧರ್ ಸುಳ್ಯ, ಜತೆ ಕಾರ್ಯದರ್ಶಿಯಾಗಿ ಆನೀಫ್ ಸುರತ್ಕಲ್, ಜಯಪ್ರಕಾಶ್ ಉಳ್ಳಾಲ, ಸುಮಿತ್ರ ಸುಳ್ಯ ಆಯ್ಕೆಯಾದರು.