ಪುತ್ತೂರು: ಕಡಬ ಸರಸ್ವತಿ ವಿದ್ಯಾಲಯದಲ್ಲಿ ಆ.23ರಂದು ನಡೆದ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು ಇಲ್ಲಿಯ 9ನೇ ತರಗತಿಯ ಸ್ಮೃತಿ ಕೆ ಒಳಮೊಗ್ರು ಪ್ರವೀಣ್ ಪೂಜಾರಿ ಮತ್ತು ತ್ರಿವೇಣಿ ದಂಪತಿಗಳ ಪುತ್ರಿ ಪ್ರಥಮ ಸ್ಥಾನದೊಂದಿಗೆ ಗೋಲ್ಡ್ ಮೆಡಲ್ ಪಡೆದು ಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
9ನೇ ತರಗತಿಯ ವಿದ್ಯಾರ್ಥಿಗಳಾದ ಲಾವಣ್ಯಾ ನಾಯಕ್ ಮುಂಡೂರಿನ ಲವ ಕುಮಾರ್ ಮತ್ತು ನಳಿನಾಕ್ಷಿ ನಾಯಕ್ರವರ ಪುತ್ರಿ. ಶೇಕ್ ಮೊಹಮ್ಮದ್ ಮುಸ್ತಫಾ ಜಿಡೆಕಲ್ಲು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು, ಇವರು ಶೇಕ್ ಅಬ್ದುಲ್ ರಹಿಮಾನ್ ಮತ್ತು ಝೀನತ್ ಬಾನು ರವರ ಪುತ್ರ. ಇವರಿಗೆದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್ರವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.