ಪಡೀಲಿನಲ್ಲಿ “ಗ್ಯಾಲಕ್ಸಿ ಎಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಾಯನ್ಸ್” ಶೋರೂಮ್ ಶುಭಾರಂಭ

0

ಪುತ್ತೂರು; ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಸಾಮಾಗ್ರಿಗಳ ವಿಶಾಲ ಮಳಿಗೆ “ಗ್ಯಾಲಕ್ಸಿ ಎಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಯನ್ಸ್” ಆ.25ರಂದು ಪಡೀಲಿನಲ್ಲಿ ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ಪಾಲುದಾರ ತಾಜುದ್ದೀನ್ ಸಾಲ್ಮರವರ ತಾಯಿ ಆಯಿಷಾ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.


ಮುಖ್ಯ ಅತಿಥಿಯಾಗಿದ್ದ ಅಶೋಕ್ ರೈ ಮಾತನಾಡಿ, ಪುತ್ತೂರಿನ ಬೆಳವಣಿಗೆಗೆ ಗ್ಯಾಲಕ್ಸಿಯಂತ ಮಳಿಗೆಗಳು ಸಹಕಾರಿ. ಮಳಿಗೆಗಳಲ್ಲಿ ಗುಣ ಮಟ್ಟದ ಸಾಮಾಗ್ರಿ, ಉತ್ತಮ ಬೆಲೆ ಹಾಗೂ ಉತ್ತಮ ಸೇವೆ ನೀಡಿದಾಗ ಗ್ರಾಹಕರು ಆಕರ್ಷಿತರಾಗುತ್ತಾರೆ. ಸಿಬ್ಬಂದಿಗಳು ನನ್ನದು ಎಂಬ ಭಾವನೆಯಿಂದ ಕೆಲಸಮಾಡಬೇಕು. ಹೊಸ ಹೊಸ ಮಳಿಗೆಗಳು ಪ್ರಾರಂಭವಾದಂತೆ ಉದ್ಯೋಗ ದೊರೆಯಲಿದೆ. ಇಂತಹ ಮಳಿಗೆಗಳು ಪುತ್ತೂರಿಗೆ ಅವಶ್ಯಕತೆ ಇದೆ ಎಂದರು.


ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಮಾತನಾಡಿ, ಶ್ರೀಮಂತರ ಮನೆಗಳಲ್ಲಿರುವ ಆಧುನಿಕ ಸಾಮಾಗ್ರಿಗಳು ಬಡವರ ಮನೆಯಲ್ಲಿರಬೇಕು ಎಂಬ ಬಯಕೆಯಿದೆ. ಆದರೆ ಆರ್ಥಿಕ ಅಡಚನೆಯಿಂದ ಖರೀದಿ ಮಾಡುವುದು ಅಸಾಧ್ಯ. ಆದರೆ ಗ್ಯಾಲಕ್ಸಿ ಮಳಿಗೆಯಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಬಡವರ ಮನೆ ಬಾಗಿಲಿಗೆ ಸೇವೆ ದೊರೆಯಲಿದೆ. ಸ್ಪರ್ಧಾತ್ಮಕ ಯುಗದ ಸವಾಲಿನಲ್ಲಿಯೂ ಯಶಸ್ವಿ ಉದ್ಯಮವಾಗಿ ಬೆಳೆದು ಎರಡನೇ ಮಳಿಗೆ ಪ್ರಾರಂಭಗೊಂಡಿರುವುದು ಸಂಸ್ಥೆಯು ಬೆಳವಣಿಗೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಮಳಿಗೆಯ ಸೇವೆಗಳ ಬಗ್ಗೆ ಜನರು ಪ್ರಚಾರ ನೀಡುವಂತೆ ವಿನಂತಿಸಿದರು.


ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಗ್ಯಾಲಕ್ಸಿ ಮಳಿಗೆಗಳಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಾನಿಕ್ ಹಾಗೂ ಮನೆ ಬಳಕೆಯ ಸಾಮಾಗ್ರಿಗಳು ಲಭ್ಯವಿದ್ದು ಬಡವರ ಪಾಲಿನ ಭಾಗ್ಯ. ತನ್ನ ಮನೆಗೆ ಆವಶ್ಯಕವಾದ ಸಾಮಾಗ್ರಿಗಳನ್ನು ನೂತನ ಮಳಿಗೆಯಿಂದಲೇ ಖರೀದಿಸುವುದಾಗಿ ತಿಳಿಸಿದ ಅವರು ಸಂಸ್ಥೆಯ ಇನ್ನಷ್ಟು ಮಳಿಗೆಗಳು ಪ್ರಾರಂಭವಾಗಲಿ ಎಂದರು.


ನಗರ ಸಭಾ ಉಪಾಧ್ಯಕ್ಷ ಬಾಲಚಂದ್ರ ಕೂರ್ನಡ್ಕ, ರಾಬಿನ್ ತಾವ್ರೋ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಹಿಮಾನ ಆಝಾದ್, ಸಾಲ್ಮರ ಮಸೀದಿ ಅಧ್ಯಕ್ಷ ಡಾ.ಸಂಶುದ್ದೀನ್ ಸಾಲ್ಮರ, ಮುಸ್ಲಿಂ ಯುವಜನ ಪರಿಷತ್‌ನ ಅಧ್ಯಕ್ಷ ಅಶ್ರಫ್ ಕಲ್ಲೇಗ, ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಕೆ.ಎ ಸಿದ್ದೀಕ್, ಎಸ್‌ಡಿಟಿಯುಐ ಮುಖಂಡ ಹಮೀದ್ ಸಾಲ್ಮರ, ಗುತ್ತಿಗೆದಾರ ಬಿ.ಜಿ ಜುನೈದ್, ಯಾಸಿನ್ ಚಿಕನ್ ಸೆಂಟರ್ ಮ್ಹಾಲಕ ಆದಂ ಹಾಜಿ, ಆರ್.ಪಿ ಅಬ್ದುಲ್ ರಜಾಕ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ನಝೀರ್ ಮಠ, ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ, ಹಿಂದೂಸ್ಥಾನ ಲಾಡ್ಜ್‌ನ ಮ್ಹಾಲಕ ಶರೀಫ್ ಅಬ್ಬಾಸ್ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು. ಮಳಿಗೆ ಪಾಲುದಾರರಾದ ತಾಜುದ್ದೀನ್ ಸಾಲ್ಮರ, ಅಶ್ರಫ್ ಬಾವು ಹಾಗೂ ಇರ್ಫಾನ್ ಹಾಗೂ ನವಾಝ್ ಸಾಲ್ಮರ, ಇಫಾಝ್ ಬನ್ನೂರು, ಶಾಕೀರ್ ಸಾಲ್ಮರ, ಫಾರೂಕ್ ಸಾಲ್ಮರ, ರಶೀದ್ ಸಾಲ್ಮರ, ಅಲಿ ಸಾಲ್ಮರ, ಸಮೀರ್ ಸಾಲ್ಮರ, ಜುನೈದ್ ಸಾಲ್ಮರ, ರಜಾಕ್, ಸಾಲಿ ಅತಿಥಿಗಳನ್ನು ಗೌರವಿಸಿದರು. ಅಬ್ದುಲ್ ರಜಾಕ್ ಕಾರ್ಯಕ್ರಮ ನಿರೂಪಿಸಿದರು.

ಅತೀ ಕಡಿಮೆ ಬೆಲೆ, ವಿಶೇಷ ಆಫರ್:
ನಮ್ಮ ಮಳಿಗೆಯಲ್ಲಿ ಮನೆಗೆ ಅಗತ್ಯವಿರುವ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ಸಾಮಾಗ್ರಿಗಳು ಅತೀ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ. ಇಎಂಐ ಫೈನಾನ್ಸ್ ಸೌಲಭ್ಯವೂ ದೊರೆಯಲಿದೆ. ಮಳಿಗೆ ಶುಭಾರಂಭದ ಅಂಗವಾಗಿ ಗ್ರಾಹಕರು ಖರೀದಿಸುವ ಪ್ರತಿಯೊಂದು ಉಪಕರಣಗಳ ಮೇಲೆ ಶೇ.35 ರಿಂದ 70 ರವರೆಗೆ ಭಾರೀ ರಿಯಾಯಿತಿ ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here