ʼತೆನ್ಕಾಯಿ ಮಲೆʼ ಕಿರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

0

ಪುತ್ತೂರು: ಇನ್ಸ್ಪೈರ್ ಫಿಲಂ ಅರ್ಪಿಸುತ್ತಿರುವ ಅಜ್ಜನ ಮಾಯೆ ಕಿರುಚಿತ್ರ ಖ್ಯಾತಿಯ ರವಿಚಂದ್ರ ರೈ ಮುಂಡೂರು ನಿರ್ದೇಶನದ ಬಹು ನಿರೀಕ್ಷಿತ ತೆನ್ಕಾಯಿ ಮಲೆ ಕಿರು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಪುತ್ತೂರು ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಆ.24ರಂದು ನಡೆಯಿತು.

ಹಿರಿಯರಾದ ಪೂವಪ್ಪ ಪೋಸ್ಟರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ಚಲನಚಿತ್ರ ಹಾಗೂ ರಂಗಭೂಮಿ ನಟ ಚೇತನ್ ರೈ ಮಾಣಿ ಶುಭ ಹಾರೈಸಿದರು. ಚಿತ್ರದ ನಿರ್ದೇಶಕ ರವಿಚಂದ್ರ ರೈ ಮುಂಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಧರ್ಮ ಚಾವಡಿ ಚಿತ್ರದ ನಿರ್ಮಾಪಕ ಜಗದೀಶ್ ಅಮೀನ್ ನಡು ಬೈಲು, ಮಾಯಿ ಕಿರು ಚಿತ್ರದ ನಿರ್ಮಾಪಕ ಅಜಿತ್ ಬಿ ಟಿ , ಸುಶಾಂತ್ ಆಚಾರ್ಯ, ಪ್ರಮಿತ್ ರಾಜ್ ಕಟ್ಟತ್ತಾರು, ಪ್ರಮೀಳಾ ಶೆಟ್ಟಿ ,ಗಣೇಶ್ , ತಂಡದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞಾನರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಿತ್ರದ ನಾಯಕಿ ಶ್ರೇಯಾ ಸುಳ್ಯ ನಿರೂಪಿಸಿದರು.

ಚಿತ್ರದಲ್ಲಿ ಪ್ರಮುಖವಾಗಿ ಚಲನಚಿತ್ರರಂಗದ ಪ್ರಖ್ಯಾತ ನಟರಾದ ದೀಪಕ್ ರೈ ಪಾಣಾಜೆ ,ಚೇತನ್ ರೈ ಮಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಷಣ್ಮುಖ ಪ್ರಸಾದ್ ಛಾಯಾಗ್ರಾಹಕರಾಗಿ , ಮ್ಯೂಸಿಕ್ ಡೈರೆಕ್ಟರ್ ಆಗಿ ನಿಶ್ಚಿತ್ ರಾಜ್ ಹಾಗೂ ಪೋಸ್ಟರ್ ಸಂಕಲನದಲ್ಲಿ ಪ್ರಸನ್ನ ರೈ , ಹಾಗೂ ಚಿತ್ರದ ಸಂಕಲನವನ್ನು ಸಾಯಿ ಚರಣ್ ರೈ
ನಿರ್ದೇಶನ ವಿಭಾಗದಲ್ಲಿ ಹೃದಯಿ , ಕೀರ್ತನ್ ಶೆಟ್ಟಿ ಸುಳ್ಯ, ಅಶ್ವಥ್ , ಪ್ರವೀಣ್ ಕಾರ್ಯನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here