ಸಾಂದೀಪನಿ ಶಾಲೆಯಲ್ಲಿ ವಿಶೇಷ ಭಜನಾ ಕಾರ್ಯಕ್ರಮ

0

ಪುತ್ತೂರು: ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಾಬ್ಧಿಯ ಅಂಗವಾಗಿ ಆಗಸ್ಟ್ 24ರಂದು ನರಿಮೊಗರು ಗ್ರಾಮದ ಸಾಂದೀಪನಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ 108 ಭಜನೆಗಳ ವಿಶೇಷ ಕಾರ್ಯಕ್ರಮ ಜರಗಿತು.

ಈ ಭಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 7 ಸಮಿತಿಗಳ ಸುಮಾರು 150 ಸದಸ್ಯರು,ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಒಟ್ಟು 350 ಭಕ್ತರು ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಮಂಗಳೂರಿನ ಈಶ್ವರಾಂಬಾ ಟ್ರಸ್ಟ್ ನ ವತಿಯಿಂದ ಸಾಂದೀಪನಿ ಶಾಲೆಗೆ ಶುಧ್ದೀಕರಿಸಿದ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು. ಇದನ್ನು ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಪದ್ಮನಾಭ ಪೈ ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.


ಸಾಂದೀಪನಿ ಸಂಸ್ಥೆಗಳ ಅಧ್ಯಕ್ಷ ಜಯರಾಮ ಕೆದಿಲಾಯರು ಅಧ್ಯಕ್ಷತೆ ವಹಿಸಿದ್ದರು.ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯದ ಮಹಿಳಾ ಸೇವಾ ಸಂಯೋಜಕಿ ಪ್ರಿಯಾ ಪಿ ಪೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸತ್ಯಸಾಯಿ ಸಂಸ್ಥೆಗಳ ಜಿಲ್ಲಾಧ್ಯಕ್ಷ ಪ್ರಸನ್ನ ಯನ್ ಭಟ್ಟರು ಸ್ವಾಗತಿಸಿದರು. ಸಾಂದೀಪನೀ ಸಂಸ್ಥೆಗಳ ಸಂಚಾಲಕ ಹಿಂದಾರು ಭಾಸ್ಕರ ಆಚಾರ್ ವಂದಿಸಿದರು.ಶಾಲೆಯ ಮುಖ್ಯೋಪಾಧ್ಯಾಯ ಪ್ರಸನ್ನರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here