ಪುತ್ತೂರು: ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯು ಆ.9ರಂದು ಶಕ್ತಿ ವಿದ್ಯಾ ಕೇಂದ್ರ ಮಂಗಳೂರು ಇಲ್ಲಿ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಾದ ನಮನ್ ನಾಯಕ್, ವಿ ವೈಷ್ಣವ್ ಹಾಗೂ ಸ್ನೇಹಿತ ಇವರು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ನಮನ್ ನಾಯಕ್ ಬಿ (ಸಂದೀಪ್ ನಾಯಕ್ ಬಿ ಮತ್ತು ನಮಿತಾ ನಾಯಕ್ ಬಿ ದಂಪತಿ ಅವರ ಪುತ್ರ)100 ಮೀ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿಯ ಪದಕ, 100 ಮೀಟರ್ ಬ್ರೆಸ್ಟ್ ಸ್ಟೋಕ್ ನಲ್ಲಿ ಚಿನ್ನದ ಪದಕ ಹಾಗೂ 50 ಮೀಟರ್ ಬಟರ್ ಫ್ಲೈ ನಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ವೈಷ್ಣವ ,(ವೀರಪ್ಪ ಮತ್ತು ಶ್ವೇತ ದಂಪತಿ ಅವರ ಪುತ್ರ )ಇವರು 200 ಮೀಟರ್ ಬ್ರೆಸ್ಟ್ ಸ್ಟೋಕ್ ನಲ್ಲಿ ಬೆಳ್ಳಿಯ ಪದಕ 50 ಮೀಟರ್ ಬೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ ಸ್ನೇಹತ್ ಪಿ ( ಸಂಪತ್ತು ಕುಮಾರ್ ಮತ್ತು ನಮಿತಾ ದಂಪತಿ ಪತ್ರ ) 200 ಮೀಟರ್ ಫ್ರೀ ಸ್ಟೈಲ್ ಮತ್ತು 100 ಮೀಟರ್ ಬೆಸ್ಟ್ ಸ್ಟೋಕ್ ನಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ. ನಮನ ನಾಯಕ್ ಬಿ ಮತ್ತು ವೈಷ್ಣವ್ ಇವರು ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬನಶಂಕರಿ ಇಲ್ಲಿ ನಡೆಯುವ ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ತಿಳಿಸಿರುತ್ತಾರೆ.