ಪುತ್ತೂರು: ಸರ್ಕಾರಿ ಐಟಿಐ ವಿಟ್ಲದಲ್ಲಿ 2025-26ನೇ ಸಾಲಿನ ವಿದ್ಯಾರ್ಥಿಗಳಿಗೂ ಅವರ ಹೆತ್ತವರಿಗೂ ಪ್ರೇರಣಾ ಕಾರ್ಯಾಗಾರ ಆ.27ರಂದು ನಡೆಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದಿಸೆಯನ್ನು ನಿರ್ಧರಿಸುವ ಶಿಕ್ಷಣ, ಶಿಸ್ತು, ಕೈಗಾರಿಕಾ ಕೌಶಲ್ಯ ಹಾಗೂ ಪೋಷಕರ ಬೆಂಬಲದ ಮಹತ್ವವನ್ನು ಪ್ರತಿಪಾದಿಸಲಾಯಿತು. ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸದಿಂದ ಮುಂದುವರಿಯಲು, ಗುರಿ ಸಾಧನೆಗೆ ಶ್ರಮಿಸಲು ಹಾಗೂ ತಾಂತ್ರಿಕ ಶಿಕ್ಷಣದ ಸದುಪಯೋಗ ಪಡೆಯಲು ಪ್ರೇರೇಪಿಸಿದ ಕಾರ್ಯಕ್ರಮ ಇದಾಗಿದ್ದು, ಮುಖ್ಯಗುರುಗಳು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳು ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನ ಪಡೆಯಲು ತರಬೇತಿ ಅವಧಿಯನ್ನು ಶಿಸ್ತುಬದ್ಧವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು. ಪೋಷಕರೂ ಸಹ ತಮ್ಮ ಮಕ್ಕಳ ಶಿಕ್ಷಣಯಾತ್ರೆಯಲ್ಲಿ ನಿರಂತರ ಪ್ರೋತ್ಸಾಹ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕಿರಿಯ ತರಬೇತಿ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಹೆತ್ತವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಿರಿಯ ತರಬೇತಿ ಅಧಿಕಾರಿಯಾದ ರತಿ ವಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ತೀರ್ಥಕ್ಷಿ ಎನ್ ವಂದಿಸಿದರು. ಶರತ್ ಕುಮಾರ್ ಎಸ್.ಎಚ್ ಕಾರ್ಯಕ್ರಮ ನಿರೂಪಿಸಿದರು.