ಶಾಸಕರ ಕಚೇರಿಯಿಂದಲೇ ಭ್ರಷ್ಟಾಚಾರಕ್ಕೆ ಆರಂಭ – ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ

0

ಪುತ್ತೂರು: ಅಕ್ರಮ ಸಕ್ರಮ ಫೈಲು ಒಬ್ಬ ಶಾಸಕನ ಕಚೇರಿಗೆ ಹೋಗಿ ಅಲ್ಲಿಂದ ತಹಸೀಲ್ದಾರ್ ಕಚೇರಿಗೆ ಹೋಗಿ ಮಂಜೂರು ಮಾಡುವ ಪದ್ಧತಿ ಹಿಂದಿನ ಎಲ್ಲಾ ಶಾಸಕರ ಅವಧಿಯಲ್ಲಿ ಇರಲಿಲ್ಲ. ಇವತ್ತು ಅದು ನಡೆಯುತ್ತಿದೆ. ಹಾಗಾಗಿ ಭ್ರಷ್ಟಾಚಾರ ಶಾಸಕರ ಕಚೇರಿಯಿಂದಲೇ ಆರಂಭಗೊಳ್ಳುತ್ತಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಅಭಿವೃದ್ಧಿಯಲ್ಲಿ ಸುದ್ದಿ ಮಾಡಬೇಕಾಗಿದ್ದ ಪುತ್ತೂರು ಲಂಚಾವತಾರದಲ್ಲಿ ಸುದ್ದಿ ಮಾಡುತ್ತಿದೆ. ಪುತ್ತೂರಿನಲ್ಲಿ ಲೋಕಾಯುಕ್ತ ದಾಳಿಯಾದಾಗ ತಹಸೀಲ್ದಾರ್ ಪರಾರಿಯಾಗಿದ್ದು ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಆಗಿದೆ. ಭ್ರಷ್ಟಾಚಾರ, ಲಂಚಾವತಾರ ಹಿಂದೆಯೂ ಇತ್ತು. ನಾನು ಶಾಸಕನಾಗಿದ್ದ ಸಂದರ್ಭ ಇದ್ದ ತಹಸೀಲ್ದಾರ್ ಡಾ. ಪ್ರದೀಪ್ ಅವರು ಭ್ರಷ್ಟಾಚಾರ ಮಾಡುತ್ತಿರುವ ಮಾಹಿತಿ ತಿಳಿದು ನಾನೆ ನಮ್ಮ ಕಾರ್ಯಕರ್ತರ ಮೂಲಕ ಲೋಕಾಯುಕ್ತಕ್ಕೆ ಹಿಡಿಸಿ ಕೊಟ್ಟಿದ್ದೇನೆ. ಭ್ರಷ್ಟಾಚಾರ ಸಹಿಸಿಕೊಳ್ಳುವುದಿಲ್ಲ ಎಂದು ನಾನು ಆಗಲೇ ಭ್ರಷ್ಟಾಚಾರಿಗಳನ್ನು ಕಳುಹಿಸುವ ಕೆಲಸ ಮಾಡಿದ್ದೇನೆ. ಪುತ್ತೂರಿನ ಶಾಸಕರು ಚುನಾವಣೆಯಲ್ಲಿ ಗೆದ್ದ ತಕ್ಷಣ ಭ್ರಷ್ಟಾಚಾರ ಬಿಜೆಪಿಯವರು ಮಾಡಿದ್ದಾರೆ. ಅಕ್ರಮ ಸಕ್ರಮದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಹೇಳಿದಾಗ ಜನ ಅದನ್ನು ನಂಬಿದ್ದರು. ಆದರೆ ಇದೇ ಸಂದರ್ಭ ಪುತ್ತೂರಿಗೆ ಲೋಕಾಯುಕ್ತದಲ್ಲಿ ಟ್ರಾಪ್ ಆಗಿ ಜೈಲು ಶಿಕ್ಷೆ ಅನುಭವಿಸಿ ಬಂದ ತಹಶೀಲ್ದಾರ್ ಅವರು ಅಕ್ರಮಸಕ್ರಮ, 94 ಸಿ, ಸಿಸಿಯಲ್ಲಿ ಮಂಜೂರಾತಿ ಮಾಡುವಾಗ ಎಷ್ಟು ನ್ಯಾಯ ಕೊಟ್ಟಿರಬಹುದು ಎಂಬುದನ್ನು ಕೂಡಾ ಚಿಂತಿಸಬೇಕು. ಯಾಕೆಂದರೆ ಇವತ್ತು ತಾಲೂಕು ಕಚೇರಿಯಲ್ಲಿ ಅಕ್ರಮ ಸಕ್ರಮ ಸಕ್ರಮದ ಎನ್‌ಒಸಿಗೆ ಲಂಚ ಪಡೆಯಬೇಕಾದರೆ ಅಕ್ರಮ ಸಕ್ರಮದಲ್ಲಿ ಎಷ್ಟು ದುಡ್ಡು ತೆಗೆದು ಕೊಂಡಿರಲಿಕ್ಕಿಲ್ಲ ಎಂದು ಜನರು ಮಾತನಾಡುತ್ತಿದ್ದಾರೆ. ಇವತ್ತು ಅರ್ಜಿದಾರರಿಗೆ ನ್ಯಾಯ ಕೊಡಬೇಕು ಎಂದುಆಗ್ರಹಿಸಿದ ಅವರು ಹಿಂದಿನ ನಿಕಟಪೂರ್ವ ತಹಸೀಲ್ದಾರ್ ರಾತ್ರಿ ಬೆಳಗೆ ಆಗುವಾಗ ಸಾಗುವಳಿ ಚೀಟಿ ಹಕ್ಕು ಪತ್ರ ಕೊಟ್ಟಿದ್ದಾರೆ ಎಂದು ನನಗೆ ಮಾಹಿತಿ ಬಂದಿದೆ. ಆ ನಿಕಟಪೂರ್ವ ತಹಶೀಲ್ದಾರ್ ಅವಧಿಯಲ್ಲಿ ಆದ ಎಲ್ಲಾ ಅಕ್ರಮ ಸಕ್ರಮ ಮಂಜೂರಾತಿಯನ್ನು ಲೋಕಾಯುಕ್ತ ತನಿಖೆ ಮಾಡಬೇಕು. ಅದು ನ್ಯಾಯಯುತವಾಗಿ ಆಗಿದಾ ಅಥವಾ ಭ್ರಷ್ಟಾಚಾರದಿಂದ ಕೂಡಿದಾ ಎಂದು ತನಿಖೆ ಮಾಡಬೇಕು ಅದರ ಜೊತೆಯಲ್ಲಿ ಶಾಸಕರ ಕಚೇರಿಗೆ ಅಕ್ರಮ ಸಕ್ರಮ ಕಡತ ಹೋಗಿ ಮತ್ತೆ ತಹಸೀಲ್ದಾರ್ ಕಚೇರಿಗೆ ಹೋಗುತ್ತಿರುವುದು ಭ್ರಷ್ಟಾಚಾರಕ್ಕೆ ಮೂಲಕ ಶಾಸಕರ ಕಚೇರಿ ಆಗಿರುವುದು ಕಂಡು ಬರುತ್ತಿದೆ ಎಂದವರು ಆರೋಪಿಸಿದ್ದಾರೆ.

ಒಬ್ಬ ಅರ್ಜಿ ಕೊಟ್ಟಾಗ ಅದು ಗ್ರಾಮಾಧಿಕಾರಿಯಿಂದ ರೆವಿನ್ಯೂ ಇನ್‌ಸ್ಟೆಕ್ಟರ್‌ಗೆ ಹೋಗುತ್ತದೆ. ಅವರು ಅದನ್ನು ಪರಿಶೀಲನೆ ಮಾಡಿ ತಹಸೀಲ್ದಾರ್ ಸಹಿ ಮಾಡಿ ಸಮಿತಿ ಸಭೆಗೆ ಇಡಬೇಕು. ಶಾಸಕರ ನೇತೃತ್ವದ ಸಮಿತಿ ಅದನ್ನು ಮಂಜೂರು ಮಾಡುತ್ತದೆ. ಆದರೆ ಇಲ್ಲಿ ಎಲ್ಲಿಯೂ ಶಾಸಕರ ಕಚೇರಿಗೆ ಕಡತ ಹೋಗುವ ಉಲ್ಲೇಖವಿಲ್ಲ. ಆದರೆ ಇವತ್ತು ನೂರಕ್ಕೆ ನೂರು ರಾಜಕೀಕರಣವನ್ನು ಅಕ್ರಮಸಕ್ರಮ ಮತ್ತು 94 ಸಿ ಮತ್ತು ಸಿಸಿಯಲ್ಲಿ ಮಾಡುತ್ತಿದ್ದಾರೆ. ಹಾಗಾಗಿ ಈ ಎಲ್ಲಾ ಬೆಳ್ಳವಣಿಗೆಯಲ್ಲಿ ತಹಸೀಲ್ದಾರ್ ಪರಾರಿಯಾಗಿ ರಕ್ಷಣೆಗಾಗಿ ಶಾಸಕರ ಮನೆಗೆ ಮತ್ತು ಕಚೇರಿಗೆ ಹೋಗಿರಬಹುದೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಪುತ್ತೂರಿನಲ್ಲಿ ಭ್ರಷ್ಟಾಚಾರವನ್ನು ಪೋಷಣೆ ಮಾಡುವ ಕೆಲಸ ಆಗುತ್ತಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಶಶಿಧರ್ ನಾಯಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here