ಪುತ್ತೂರು: ಪುತ್ತೂರು ತಾಲೂಕು ಕಚೇರಿಗೆ ಶಾಸಕ ಅಶೋಕ್ ರೈ ಅವರು ದಿಢೀರ್ ಭೇಟಿ ನೀಡಿ ಅಕ್ರಮ ಸಕ್ರಮ ಹಾಗೂ 94 ಸಿ ಹಾಗೂ ಸಿ ಸಿ ಕಡತಗಳನ್ನು ಪರಿಶೀಲನೆ ನಡೆಸಿದರು.

ಒಂದು ವಾರದೊಳಗೆ ಬಾಕಿ ಇರುವ ಕಡತಗಳ ಪಟ್ಟಿಯನ್ನು ನೀಡುವಂತೆ ಸೂಚನೆ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಕಂದಾಯ ಇಲಾಖೆಗೆ ಲೋಕಾಯುಕ್ತ ದಾಳಿ ಬಗ್ಗೆ ಪ್ರತಿಕ್ರಿಯಿಸಿದರು. ‘ಯಾವುದೇ ಸರಕಾರಿ ಕೆಲಸಕ್ಕೂ ದುಡ್ಡು ಕೊಡಲು ಹೋಗಬೇಡಿ, ಬಡವರನ್ನು ಪೀಡಿಸುವ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ನಾವೇ ಹಿಡಿಸ್ತೇವೆ. ನಾವು ನಿಮ್ಮ ಸೇವೆಗೆ ಇರುವವರು, ನಮ್ಮ ಬಳಿಗೆ ಬನ್ನಿ, ಇವತ್ತು ತಾಲೂಕು ಕಚೇರಿಗೆ ಭೇಟಿ ನೀಡಿದ್ದೇನೆ. ಬಾಕಿ ಇರುವ ಕಡತಗಳ ಬಗ್ಗೆ ದಾಖಲೆಗಳನ್ನು ಕೇಳಿದ್ದೇನೆ. ಎಲ್ಲಾ ಕಡೆ ಅಧಿಕಾರಿಗಳನ್ನೇ ದೂರುವುದು ಸಾಧ್ಯವಿಲ್ಲ,ದೇಶದಲ್ಲಿ ಯಾರು ಪ್ರಾಮಾಣಿಕರು ಎಂದು ದೇವರೇ ಸರ್ಟಿಫಿಕೇಟ್ ಕೊಡಬೇಕಷ್ಟೇ, ನಮಗೆ ಬಡವರ ಕೆಲಸಗಳು ಸಮರ್ಪಕವಾಗಿ ಆಗಬೇಕು ಅಷ್ಟೇ’ ಎಂದರು.