ಪುತ್ತೂರು:ಪತ್ನಿಯ ಸಾವಿನಿಂದ ನೊಂದು ಖಿನ್ನತೆಗೊಳಗಾಗಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಚ್ಚಿಮಲೆಯಿಂದ ವರದಿಯಾಗಿದೆ.
ಆರ್ಯಾಪು ಗ್ರಾಮದ ಮಚ್ಚಿಮಲೆ ಬೊಳ್ಳಾನ ನಿವಾಸಿ ಗಣೇಶ್ ಸಪಲ್ಯ(70ವ)ರವರು ಮೃತಪಟ್ಟವರು.ಆ.16ರಂದು ಗಣೇಶ್ ಸಪಲ್ಯ ಅವರ ಪತ್ನಿ ಭಾಗೀರಥಿ ಮೃತಪಟ್ಟಿದ್ದರು.ಆ.28ರಂದು ಅವರ ಉತ್ತರ ಕ್ರಿಯೆ ನಿಗದಿಯಾಗಿತ್ತು.ಆದರೆ ಗಣೇಶ್ ಅವರು ನಾಪತ್ತೆಯಾಗಿದ್ದರು.ಅವರನ್ನು ಹುಡುಕಾಡಿದಾಗ ಜಾನಕಿ ಎಂಬವರ ಮನೆಯಂಗಳದ ಬಾವಿಯಲ್ಲಿ ಗಣೇಶ್ ಅವರ ಮೃತದೇಹ ಪತ್ತೆಯಾಗಿತ್ತು.ಗಣೇಶ್ ಸಪಲ್ಯ ಅವರು ಪತ್ನಿಯ ಮರಣದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪುತ್ರಿ ಭಾರತಿಯವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.