ಕೆದಂಬಾಡಿ ಆಸರೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಹಾಸಭೆ

0

ಪುತ್ತೂರು: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಅನುಷ್ಠಾನಗೊಂಡ ಆಸರೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕೆದಂಬಾಡಿ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಆ.30ರಂದು ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಒಕ್ಕೂಟ ದ ಅಧ್ಯಕ್ಷೆ ವಿದ್ಯಾವತಿ ರೈ ಯವರ ಅಧ್ಯಕ್ಷತೆ ವಹಿಸಿದ್ದರು.ಪಂಚಾಯತ್ ಅಧ್ಯಕ್ಷರಾದ ಸುಜಾತಾ ಮುಳಿಗದ್ದೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಜೀವಿನಿ ಸಂಘ ಮಹಿಳೆಯರಿಗೆ ಒಂದು ಬಲ ಇದ್ದಂತೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮುಂದುವರಿಯಲು ಸಂಘ ಸಂಸ್ಥೆಗಳು ಕಾರಣ ಎಂದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಮಾತನಾಡಿ, ಪಂಚಾಯತ್ ಮತ್ತು ಸಂಜೀವಿನಿ ಒಕ್ಕೂಟ ಒಂದು ನಾಣ್ಯದ ಎರಡು ಮುಖವಿದ್ದಂತೆ.ಸಂಜೀವಿನಿ ಒಕ್ಕೂಟದ ಎಲ್ಲಾ ಸದಸ್ಯರು ಒಮ್ಮತದಿಂದ ಇರಬೇಕು.ನಮ್ಮದೇ ಮನೆ ಎಂಬ ಭಾವನೆ ಇರಬೇಕು .ಹಾಗಿದ್ದರೆ ಮಾತ್ರ ನಮ್ಮ ಒಕ್ಕೂಟ ಯಶಸ್ವಿಯಾಗಲಿ ಸಾಧ್ಯ ಆಸರೆ ಸಂಜೀವಿನಿ ಒಕ್ಕೂಟ ಮಾದರಿ ಒಕ್ಕೂಟ ಬೆಳೆಯಲಿ ಎಂದರು.

ತಾಲೂಕು ಸಂಪನ್ಮೂಲ ವ್ಯಕ್ತಿ ವಿದ್ಯಾಶ್ರೀ ಸಂಜೀವಿನಿ ಸಂಘದ ದಾಖಲಾತಿ ಬಗ್ಗೆ,ಜೀವನೋಪಾಯ ಚಟುವಟಿಕೆ ಬಗ್ಗೆ,ಲಿಂಗತ್ವ ಅಭಿಯಾನ ಮತ್ತು FNHW ಅಭಿಯಾನದ ಕುರಿತು, ನಲ್ ಜಲ್ ಮಿತ್ರದ ಬಗ್ಗೆ,ಘನತ್ಯಾಜ್ಜ ನಿರ್ವಹಣೆಯ ಬಗ್ಗೆ, ಹಾಗೂ ಮಾದಕ ವ್ಯಸನ ಮಾದಕ ವಸ್ತು ಮುಕ್ತ ಕರ್ನಾಟಕ ಎಂಬ ಜಾಗೃತಿ ಅಭಿಯಾನದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.


ತಾಲುಕು ಮಟ್ಟದ FLCRP ಗೀತಾ ಬ್ಯಾಂಕ್ ಲೋನೀನ ಬಗ್ಗೆ ಹಾಗೂ ವಿಮೆಯ ಬಗ್ಗೆ ಮಾಹಿತಿ ನೀಡಿದರು. ಸಾಂತ್ವಾನ ಕೇಂದ್ರದ ಆಪ್ತ ಸಮಾಲೋಚಕಿ ಸ್ವಾತಿ ಮುಟ್ಟಿನ ಕಪ್ ಬಳಕೆ ಬಗ್ಗೆ ಹಾಗೂ ಲಿಂಗತ್ವ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.ವಲಯ ಮೇಲ್ವಿಚಾರಕಿ ನಳಿನಾಕ್ಷಿ ಯನ್ ಆರ್ ಎಲ್ ಯಂ ಯೋಜನೆಯ ಬಗ್ಗೆ ಸ್ವ ಉದ್ಯೋಗದ ಬಗ್ಗೆ ಮಾಹಿತಿ ನೀಡಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ,ಸ್ವಚ್ಛತಾ ಸೇನಾನಿ ಯವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ಹಾಗೂ 2023 -24 ನೇ ಸಾಲಿನ ಒಕ್ಕೂಟದ ಪದಾಧಿಕಾರಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಪುಷ್ಪಾವತಿ ರೈ,ಆಶಾ ಕಾರ್ಯಕರ್ತೆಯರು ಪ್ರೇಮಲತಾ ರೈ ಹಾಗೂ ಸುಂದರಿ ಉಪಸ್ಥಿತರಿದ್ದರು.

2024-25ರ ವಾರ್ಷಿಕ ವರದಿಯನ್ನು ಒಕ್ಕೂಟದ ಕಾರ್ಯದರ್ಶಿ ಕವಿತಾ ವಾಚಿಸಿದರು.2024-25ರ ಲೆಕ್ಕ ಪರಿಶೋಧನೆಯನ್ನು ಕೃಷಿಸಖಿ ಪುಷ್ಪಾವತಿ ಮಂಡಿಸಿದರು.2025-26 ವಾರ್ಷಿಕ ಕ್ರಿಯಾ ಯೋಜನೆಯನ್ನು ಘಟಕದ ಸಿಬ್ಬಂದಿ ಪುಷ್ಪ ಯಂ ಮಂಡಿಸಿದರು.

ಒಕ್ಕೂಟದ ಸಿಬ್ಬಂದಿ ಪೂರ್ಣಿಮಾ ಪ್ರಾರ್ಥಿಸಿದರು.ಒಕ್ಕೂಟದ ಜೊತೆ ಕಾರ್ಯದರ್ಶಿ ಸಂಧ್ಯಾಕುಮಾರಿ ಸ್ವಾಗತಿಸಿದರು. ಪಶು ಸಖಿವಸಂತಿಯವರು ವಂದಿಸಿದರು.ಯಂ ಬಿ ಕೆ ಲೀಲಾ ಕೆ ( ಶುಭ ರೈ) ಕಾರ್ಯಕ್ರಮ ನಿರೂಪಿಸಿದರು. ಯಲ್ ಸಿಆರ್ ಪಿ ಜಯಲತಾ, ಕೃಷಿ ಉದ್ಯೋಗ ಸಖಿ ಗಿರಿಜಾ ,ಪಂಚಾಯತ್ ಸಿಬ್ಬಂದಿ ಸಹಕರಿಸಿದರು.

LEAVE A REPLY

Please enter your comment!
Please enter your name here