ವಿಟ್ಲ: ಮಾಣಿ ವಲಯದ ಬರಿಮಾರು ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮ ಬರಿಮಾರಿನ ಶ್ರೀ ವಿನಾಯಕ ಶ್ರೀ ದೇವಿ ಭಜನಾ ಮಂದಿರದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬರಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾಶಿವ ರವರು ಉದ್ಘಾಟಿಸಿದರು.
ಬರಿಮಾರು ಒಕ್ಕೂಟದ ಅಧ್ಯಕ್ಷರೂ, ಮಾಣಿ ವಲಯಧ್ಯಕ್ಷರಾದ ಸುಧಾಕರ ಸಪಲ್ಯ ಕಾರ್ಯಕ್ರಮದ ಅಧ್ಯಕ್ಷೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಮಾ ವಿಭಾಗದ ಯೋಜನಾಧಿಕಾರಿ ಸತೀಶ್ , ಬಂಟ್ವಾಳ ತಾಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್ , ಜಿ. ಪಂ. ಮಾಜಿ ಸದಸ್ಯೆ ಕಮಲಾಕ್ಷಿ, ಉದ್ಯಮಿ ರತ್ನಾಕರ, ಬರಿಮಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಅಮಿತ್ ಜೈನ್, ಶಾಲೆಯ ಮುಖ್ಯ ಶಿಕ್ಷಕಿ ಗಾಯತ್ರಿ, ಶ್ರೀ ವಿನಾಯಕ ಶ್ರೀದೇವಿ ಭಜನಾ ಮಂದಿರದ ಅಧ್ಯಕ್ಷ ರಾದ ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.
ಉತ್ತಮ ಸಂಘಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಎಸ್.ಎಸ್.ಎಲ್.ಸಿ. ಯಲ್ಲಿ. 90% ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಹರಿಣಾಕ್ಷಿ ಸ್ವಾಗತಿಸಿ,ಸುಜಾತ ವಂದಿಸಿದರು. ಮಾಣಿ ವಲಯ ಮೇಲ್ವಿಚಾರಕಿ ಆಶಾ ಪಾರ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಪ್ರತಿನಿಧಿ ಲಾವಣ್ಯ ವರದಿ ವಾಚಿಸಿದರು.ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಗೀತಾ ಕಾರ್ಯಕ್ರಮ ನಿರೂಪಿಸಿದರು.