ನೆಲ್ಯಾಡಿ: ಶ್ರೀ ವಿನಾಯಕ ಗೆಳೆಯರ ಬಳಗ ಮೇಲೂರು ಡೆಂಬಲೆ ಇವರ ವತಿಯಿಂದ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ 10ನೇ ವರ್ಷದ ವಿವಿಧ ಆಟೋಟ ಸ್ಪರ್ಧೆ ಆ.31ರಂದು ಮೇಲೂರು ಕ್ರೀಡಾಂಗಣದಲ್ಲಿ ನಡೆಯಿತು.
ಪ್ರಗತಿಪರ ಕೃಷಿ ಪುಷ್ಪದಂತ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ದಿನೇಶ್ ಬಂಗೇರ ಮೇಲೂರು ಅಧ್ಯಕ್ಷತೆ ವಹಿಸಿದರು. ಅಥಿತಿಗಳಾಗಿ ಕೂಡುರಸ್ತೆ ಶ್ರೀರಾಮ ಕನ್ಸ್ಟ್ರಕ್ಷನ್ ಜಯಂತ್ ಒಡ್ಯಮೆ, ಬಜತ್ತೂರು ಗ್ರಾ.ಪಂ.ಸದಸ್ಯ ಮಾಧವ ಒರುಂಬೋಡಿ, ಪ್ರಗತಿಪರ ಕೃಷಿಕ ನಾರಾಯಣ ಶೆಟ್ಟಿ ಮೇಲೂರು ಭಾಗವಹಿಸಿದ್ದರು.
ಪ್ರಕಾಶ್ ಶಿವತಮಠ ಸ್ವಾಗತಿಸಿ, ಜೀವನ್ ಡೆಂಬಲೆ ವಂದಿಸಿದರು. ಗಂಗಾಧರ್ ಮೇಲೂರು ನಿರೂಪಿಸಿದರು. ಬಳಿಕ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಅಂಗನವಾಡಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.