ಇಂದಿನ ಕಾರ್ಯಕ್ರಮ (04-09-2025)

0

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ಟೀಮ್ ಕಲ್ಲೇಗ ಟೈಗರ್ಸ್‌ನ ದಸರಾ ಹಬ್ಬದ ಹುಲಿ ವೇಷ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಬೆಳಿಗ್ಗೆ ೯.೩೦ರಿಂದ ವಿಶ್ವಕರ್ಮ ಸಮಾಜ ಬಾಂಧವರಿಂದ ಆನೆಗುಂದಿ ಸರಸ್ವತಿ ಪೀಠಕ್ಕೆ ರಜತ ಹರಿವಾಣ, ಪಾದುಕೆ, ಪೀಠ ಸಮರ್ಪಣೆ ಪ್ರಯುಕ್ತ ಪಾದುಕೆಗೆ ಪುಷ್ಪಾರ್ಚನೆ ಧಾರ್ಮಿಕ ಕಾಯಕ್ರಮ
ಕಡಬ ಅನುಗ್ರಹ ಸಭಾಭವನದಲ್ಲಿ ಬೆಳಿಗ್ಗೆ ೧೦ಕ್ಕೆ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
ಬೆಟ್ಟಂಪಾಡಿ ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಡಬ ಶಾಖೆಯಲ್ಲಿ ೧೭ನೇ ವರ್ಷದ ಪಾದಾರ್ಪಣೆಯ ಪ್ರಯುಕ್ತ ಬೆಳಿಗ್ಗೆ ಗಣಹೋಮ, ಲಕ್ಷ್ಮೀಪೂಜೆ
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಾತ್ರಿ ೯ರಿಂದ ಗುತ್ತು ಮನೆತನದವರಿಂದ “ಶ್ರೀ ಜಟಾಧಾರಿ ದೈವದ ಮಹಿಮೆ” ಯಕ್ಷಗಾನ ತಾಳಮದ್ದಳೆ, ೧.೩೦ರಿಂದ ಶ್ರೀ ಜಟಾಧಾರಿ ದೈವದ ಮಹಿಮೆ ಯಕ್ಷಗಾನ
ಲೋಕ ಪ್ರವಾದಿ ಮುಹಮ್ಮದ್ ಮುಸ್ತಾಫರವರ ೧೫೦೦ನೇ ಜನ್ಮದಿನಾಚರಣೆ ಪ್ರಯುಕ್ತ ಪುತ್ತೂರು ದ.ಕ. ಜಿಲ್ಲಾ ಮುಸ್ಲಿ ಯುವಜನ ಪರಿಷತ್, ಈದ್ ಮಿಲಾದ್ ಸಮಿತಿಯಿಂದ ಬೆಳಿಗ್ಗೆ ೧೦ಕ್ಕೆ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಸಿದ್ರತುಲ್ ಮುಂತಹಾ- ಮದ್ರಸ ವಿದ್ಯಾರ್ಥಿಗಳ, ದರ್ಸ್ ಮುತಅಲ್ಲಿಂರ ಮೀಲಾದ್ ಫೆಸ್ಟ್, ಮಗ್ರಿಬ್ ನಮಾಝಿನ ಬಳಿಕ ಮೌಲಿದ್ ಮಜ್ಲಿಸ್
ಶುಭಾರಂಭ
ಪುತ್ತೂರು ಮುಖ್ಯರಸ್ತೆ, ಜಿ.ಎಲ್. ಕಾಂಪ್ಲೆಕ್ಸ್‌ನ ನೆಲಮಹಡಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಅಮಿತ್ ಹರ್ಬಲ್ ಬ್ಯೂಟಿ ಪಾರ್ಲರ್ ಸ್ಥಳಾಂತರಗೊಂಡು ಶುಭಾರಂಭ
ಕಾವು ನಿಧಿಮುಂಡ ವೆಂಕಟ್ರಾವ್ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಗಣೇಶ್ ಮೆಡಿಕಲ್ಸ್ ಶುಭಾರಂಭ
ಶುಭವಿವಾಹ
ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ ಪುತ್ತೂರು ತಾಲೂಕು ನೆ. ಮುಡ್ನೂರು ಗ್ರಾಮದ ಮೇನಾಲ ನಾರಾಯಣ ಗೌಡರ ಪುತ್ರಿ ಮೋಕ್ಷಿಣಿ (ರಶ್ಮಿ) ಮತ್ತು ಪುತ್ತೂರು ತಾಲೂಕು ನೆ. ಮುಡ್ನೂರು ಗ್ರಾಮದ ಮಡ್ಯಲಮಜಲು ದಿ| ಉಮೇಶ್ ಗೌಡರ ಪುತ್ರ ವಿಜೇತ್‌ರವರ ವಿವಾಹ

LEAVE A REPLY

Please enter your comment!
Please enter your name here