10.01 ಲಕ್ಷ ರೂ. ಲಾಭ, ಸದಸ್ಯರಿಗೆ ಶೇ.10 ಡಿವಿಡೆಂಟ್
ಪುತ್ತೂರು: ಸ್ನೇಹ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ ಮಹಾಸಭೆ ನೆಹರು ನಗರದ ಮಾಸ್ಟರ್ ಪ್ಲಾನರಿಯ ಸರ್ ಎಂ.ವಿ ಸಭಾಭವನದಲ್ಲಿ ನಡೆಯಿತು.
ಮುಖ್ಯಕಾರ್ಯನಿರ್ವಾಹಣಾಧಿಕಾರಿ ರೇಖಾ ಆನಂದ್ 2024-25ನೇ ಸಾಲಿನ ವರದಿ ವಾಚಿಸಿದರು ಸಂಘವು 2027 ಸದಸ್ಯರನ್ನು ಹೊಂದಿದ್ದು ರೂ. 8,54,09,822/- ದುಡಿಯುವ ಬಂಡವಾಳ ಹೊಂದಿರುತ್ತದೆ. ವರದಿ ಸಾಲಿನಲ್ಲಿ ಸಂಘವು ರೂ. 77,56,26,648/- ವಹಿವಾಟು ನಡೆಸಿ ರೂ 10,01,179.50/- ಲಾಭ ಗಳಿಸಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಅರ್ಜುನ್ ಎಸ್ .ಕೆ ಮಾತನಾಡಿ, ಸಂಘವು ಸದಸ್ಯರ ಗುಣಾತ್ಮಕವಾದ ವ್ಯವಹಾರ, ಸಹಕಾರದಿಂದ ಉತ್ತಮವಾಗಿ ನಡೆಯುತ್ತಿದೆ, ಸಂಘವು ಸಹಕಾರಿ ಕಾಯ್ದೆಯ ಚೌಕಟ್ಟಿನಲ್ಲಿ ಸದಸ್ಯರಿಗೆ ನಿಷ್ಪಕ್ಷಪಾತವಾಗಿ ಸೇವೆ ನೀಡುತ್ತಾ ಬರುತ್ತಿದ್ದು ಮುಂದೆಯು ನಿಮ್ಮೆಲ್ಲರ ಸಹಕಾರದೊಂದಿಗೆ ನಮ್ಮ ಈ ಸ್ನೇಹ ಸೌಹಾರ್ದವನ್ನು ಮಾದರಿ ಸಂಘವನ್ನಾಗಿಸುವ ಎಂದು ಹೇಳಿದರು. ಸಂಘವು ಉತ್ತಮವಾಗಿ ಸೇವೆ ನೀಡಲು ನಮ್ಮ ಸಿಬ್ಬಂದಿಗಳ ಸಹಕಾರವನ್ನು ಶ್ಲಾಘಿಸುತ್ತೇನೆ ಎಂದ ಅವರು, ಈ ಬಾರಿ ಶೇ.10% ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.

ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿಯುಸಿ ಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸಂಘದ ಉಪಾಧ್ಯಕ್ಷ ರಾಘವೇಂದ್ರ ಹೆಚ್.ಎಂ, ನಿರ್ದೇಶಕರಾದ ರಾಘವೇಂದ್ರ ನಾಯಕ್, ಆಕಾಶ್ ಎಸ್.ಕೆ, ನವೀನ್ ನಾಯಕ್, ಅಕ್ಷಯ್ ಎಸ್.ಕೆ, ರವಿರಾಜ್ ನಾಯ್ಕ್.ಕೆ, ವಿನಯ್ ಕುಮಾರ್ ಎಂ ಎಸ್, ಗೌರಿ ಅಕ್ಷಯ್, ಶ್ರೀನಿವಾಸ ಎನ್, ಕೇಶವ. ಕೆ. ಉಪಸ್ಥಿತರಿದ್ದರು. ನಿರ್ದೇಶಕಿ ಮುಕ್ತಾ ಎಸ್ ನಾಯಕ್ ಅಂದಾಜು ಆಯವ್ಯಯ, ಮುಂಗಡ ಪತ್ರ ಮಂಡಿಸಿದರು.
ಲೆಕ್ಕಿಗ ಪಾಂಡುರಂಗ ನಾಯಕ್ ಲೆಕ್ಕಪರಿಶೋದನಾ ವರದಿ ಮಂಡಿಸಿದರು. ಸದಸ್ಯ ಕಿಶೋರ್ ಕುಮಾರ್ ರೈ ಸ್ವಾಗತಿಸಿ, ನಿರ್ದೇಶಕ ಚಂದ್ರಶೇಖರ ಭಟ್ ವಂದಿಸಿದರು ಸಹಕಾರಿಯ ವ್ಯವಸ್ಥಾಪಕ ಹರೀಶ್ ಪಿ. ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ಮೀನಾಕ್ಷಿ ಬಿ ಹಾಗೂ ಸಿಬ್ಬಂದಿಗಳಾದ ಸುಶ್ಮಿತಾ ಎನ್.ಎಸ್, ನವ್ಯ ಬಿಎಸ್, ಅಕ್ಷತಾ ಆರ್.ಕೆ ಸಹಕರಿಸಿದರು.