ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಪುತ್ತೂರು ಇದರ ವತಿಯಿಂದ ಜರುಗಿದ ಪುತ್ತೂರು ತಾಲೂಕು ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಇಲ್ಲಿನ ಸ್ಕೌಟ್ಸ್ ವಿದ್ಯಾರ್ಥಿಗಳ ವಿಭಾಗವು ಪ್ರಥಮ ಸ್ಥಾನ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳ ವಿಭಾಗವು ಪ್ರಥಮ ಸ್ಥಾನವನ್ನು ಗಳಿಸಿದ್ದು, ಸ್ಕೌಟ್ಸ್ ವಿದ್ಯಾರ್ಥಿಗಳಾದ ಸಾಯಿ ಸಂಚಿತ್, ಸರ್ವದ್ ನಾಯಕ್, ವಿಧಾತ್ ರೈ, ಜನಿತ್.ಎಸ್, ಅಖಿಲ್ ಬಿ.ಎ, ಋತ್ವಿಕ್ ಮೊಳೆಯಾರ್, ವಿನೀತ್ ಟಿ.ಎಸ್, ನಿಶಾನ್ ಎಂ.ಎಸ್ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳಾದ ಲಕ್ಷ್ಮಿ.ಬಿ, ಚಾರ್ವಿ ಕರಂದ್ಲಾಜೆ, ಸಿಂಧು, ಹಿಮ ವೈ, ಅದಿತಿ ಹೆಚ್.ಜಿ, ವಂಶಿ ಇವರು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಸ್ಕೌಟ್ಸ್ ಮಾಸ್ಟರ್ ಗಳಾದ ಮುರಳಿಕೃಷ್ಣ.ಪಿ , ವಿಜೇತಾ , ಬುಲ್ ಬುಲ್ ಪ್ಲಾಕ್ ಲೀಡರ್ ಅನಿತಾ.ಕೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿರುತ್ತಾರೆ ಎಂದು ಸಂಸ್ಥೆಯ ಮುಖೋಪಾಧ್ಯಾಯ ಪ್ರಸನ್ನ ಕೆ ತಿಳಿಸಿರುತ್ತಾರೆ.