ಸುದಾನ ಪಿಯು ಕಾಲೇಜಿನಲ್ಲಿ ಮಹಿಳೆಯರ ಆರೋಗ್ಯ ಕುರಿತು ಉಪನ್ಯಾಸ

0

ಪುತ್ತೂರು: ಸುದಾನ ಪದವಿ ಪೂರ್ವ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ವತಿಯಿಂದ “ಮಹಿಳೆಯರ ಆರೋಗ್ಯ ಕುರಿತ ಉಪನ್ಯಾಸ” ಎಂಬ ವಿಷಯದ ಕುರಿತು ವಿಶೇಷ ಕಾರ್ಯಕ್ರಮವನ್ನು  ಎಡ್ವರ್ಡ್ ಸಭಾಂಗಣದಲ್ಲಿ ಇತ್ತೀಚಿಗೆ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಮಾಲೋಚನಾ ಮನಶ್ಯಾಸ್ತ್ರಜ್ಞೆ ಶ್ರೀಮತಿ ಪ್ರೀತಿ ಶೆಣೈ ಅವರು,“ಮಹಿಳೆಯರು ದೇಹದ ಆರೋಗ್ಯದೊಂದಿಗೆ ಮನಸ್ಸಿನಲ್ಲಿಯೂ ಸಮತೋಲನ ಹೊಂದಿರಬೇಕು. ದಿನನಿತ್ಯ ಜೀವನದಲ್ಲಿ ಸರಿಯಾದ ಆಹಾರ ಪದ್ಧತಿ, ಸ್ವಚ್ಛತೆ, ವ್ಯಾಯಾಮ, ವಿಶ್ರಾಂತಿ ಮತ್ತು ಸಕಾರಾತ್ಮಕ ಮನೋಭಾವ ಇವು ಶರೀರ–ಮನಸ್ಸಿನ ಆರೋಗ್ಯ ಕಾಪಾಡಲು ಅವಶ್ಯಕ” ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ಸುಪ್ರೀತ್ ಕೆ.ಸಿ‌ರವರು ಮಾತನಾಡಿ, ಮಹಿಳೆಯರ ಕಲ್ಯಾಣವೇ ಸಮಾಜದ ಆರೋಗ್ಯದ ಆಧಾರವಾಗಿದ್ದು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಮಹಿಳಾ ಸಬಲೀಕರಣ ಅಧ್ಯಕ್ಷೆ, ಗಣಿತ ಶಾಸ್ತ್ರದ ಉಪನ್ಯಾಸಕಿ ಧನ್ಯಶ್ರೀ ಸ್ವಾಗತಿಸಿದರು,ಗಣಿತ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಪಲ್ಲವಿ ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಕು. ಲತಾಶ್ರೀ ನಿರೂಪಿಸಿ, ಶ್ರೀಮತಿ ರಚನಾ ವಂದಿಸಿದರು. ಮಹಿಳಾ ಸಬಲೀಕರಣ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯ ಕ್ರಮದಲ್ಲಿ ಕಾಲೇಜಿನ  ವಿದ್ಯಾರ್ಥಿನಿಯರು,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಗಳು  ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here