ಅಧ್ಯಕ್ಷರಾಗಿ ರುದ್ರೇಶ್ ಪ್ರಸಾದ್
ಬೆಟ್ಟಂಪಾಡಿ: ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬೆಟ್ಟಂಪಾಡಿ ಇಲ್ಲಿ ಹಿರಿಯ ವಿದ್ಯಾರ್ಥಿ ಸಂಘವನ್ನು ಸೆ. 7 ರಂದು ರಚಿಸಲಾಯಿತು. ಅಧ್ಯಕ್ಷರಾಗಿ ರುದ್ರೇಶ್ ಪ್ರಸಾದ್ ಪೆರ್ಲ, ಉಪಾಧ್ಯಕ್ಷರಾಗಿ ಶೃತಿ ಸಿ.ಎಚ್ ಚಂದುಕೂಡ್ಲು, ಕಾರ್ಯದರ್ಶಿಯಾಗಿ ಸುಘೋಷ್ ಭಟ್ ದೇವಸ್ಯ, ಜೊತೆ ಕಾರ್ಯದರ್ಶಿಯಾಗಿ ಪ್ರಫುಲ್ ರೈ ನಿಡ್ಪಳ್ಳಿ ಆಯ್ಕೆಗೊಂಡು, ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ಸ್ತುತಿ ರೈ ಮೂರ್ಕಾಜೆ, ಜೀವನ್ ಯು.ಎಸ್ ಆರ್ಲಪದವು, ಚೇತನ್ ಹೆಚ್ ಚಂದುಕೂಡ್ಲು, ಸಾನ್ವಿತ್ ರೈ ಕಟ್ಟಾವು, ಧನೀಶ್ ಅಮೀನ್ ಆರ್ಲಪದವು, ಸಾತ್ವಿಕ್ ರಾಮ್ ಪಿಲಿಪ್ಪುಡೆ, ಅನ್ವಿತಾ ರೈ ನಿಡ್ಪಳ್ಳಿ, ವಿಮರ್ಷ್ ಆಳ್ವ ನಿಡ್ಪಳ್ಳಿ, ಸಿಂಚನ ಬಿ ಆರ್ ಬೆಟ್ಟಂಪಾಡಿ, ತ್ರಿಶಾ ಭರಣ್ಯ, ಪ್ರಾಪ್ತಿ ಕಾಟುಕುಕ್ಕೆ, ಇವರುಗಳು ಆಯ್ಕೆಗೊಂಡರು. ನೂತನವಾಗಿ ಆಯ್ಕೆಗೊಂಡ ಹಿರಿಯ ವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳನ್ನು ಮುಖ್ಯಗುರು ರಾಜೇಶ್ ಎನ್ ಇವರು ಶಾಲು ಹೊದಿಸಿ ಅಭಿನಂದಿಸಿದರು. ಸಹ ಶಿಕ್ಷಕಿ ಶ್ರೀಮತಿ ಭವ್ಯ ಸ್ವಾಗತಿಸಿ ಶ್ರೀಮತಿ ಕೃಷ್ಣವೇಣಿ ವಂದಿಸಿದರು. ಸಹ ಶಿಕ್ಷಕ ಪ್ರಶಾಂತ್ ಎ. ಕಾರ್ಯಕ್ರಮ ನಿರೂಪಿಸಿದರು.