





ಒಳ್ಳೆಯ ಸವಿರುಚಿ ಊಟ ಇದ್ರೆ ಅಲ್ಲಿ ದುಡ್ಡಿಗೆ ಕ್ಯಾರೇ ಇಲ್ಲ-ಸೀತಾರಾಮ ರೈ
ಸೀತಾರಾಮ ರೈಯವರ ಅಮೃತ ಹಸ್ತದಿಂದ ಉದ್ಘಾಟನೆ, ಯಶಸ್ವಿಯಾಗಲಿ-ಶಶಿಕುಮಾರ್ ರೈ
ಪುತ್ತೂರಿನಲ್ಲಿ ಉಪ್ಪುಂಚಿ ಪರಿಚಯಿಸಿದ್ದು, ತಂದೂರಿ ಚಿಕನ್ ತುಂಬಾನೇ ಫೇಮಸ್-ಶಿವರಾಮ ಆಳ್ವ


ಪುತ್ತೂರು: ದರ್ಬೆ ಪ್ರಶಾಂತ್ ಮಹಲ್‌ನಲ್ಲಿ ವ್ಯವಹರಿಸುತ್ತಿರುವ ಹೆರಿಟೇಜ್ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ಸಂಸ್ಥೆಯಿಂದ ಪುತ್ತೂರಿನ ಹಾಗೂ ಪುತ್ತೂರು ಆಸುಪಾಸಿನ ಜನರಿಗೆ ವಿವಿಧ ಮೀನಿನ ಖಾದ್ಯಗಳ ಹಾಗೂ ಬಿರಿಯಾನಿ ಊಟವನ್ನು ಸವಿಯುವ ಸಲುವಾಗಿ ಮತ್ತೊಂದು ಕೊಡುಗೆ ರೂಪದಲ್ಲಿ ದರ್ಬೆ ರಿಲಯನ್ಸ್ ಡಿಜಿಟಲ್ಸ್ ಬಳಿ ಹೆರಿಟೇಜ್ ಫಿಶ್ ಲ್ಯಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಅ.31 ರಂದು ಶುಭಾರಂಭಗೊಂಡಿತು.





ಒಳ್ಳೆಯ ಸವಿರುಚಿ ಊಟ ಇದ್ರೆ ಅಲ್ಲಿ ದುಡ್ಡಿಗೆ ಕ್ಯಾರೇ ಇಲ್ಲ-ಸೀತಾರಾಮ ರೈ:
ನೂತನ ಹೊಟೇಲ್‌ನ ಮಾರ್ಗದರ್ಶಕರೂ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರೂ ಆಗಿರುವ ಸಹಕಾರ ರತ್ನ ಸವಣೂರು ಸೀತಾರಾಮ ರೈರವರು ನೂತನ ರೆಸ್ಟೋರೆಂಟ್ ಅನ್ನು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಶಾಸಕ ಅಶೋಕ್ ರೈರವರ ವಿಶೇಷ ಮುತುವರ್ಜಿ ಮೇರೆಗೆ ಇನ್ನು ಕೆಲವೇ ವರ್ಷಗಳಲ್ಲಿ ಮೆಡಿಕಲ್ ಕಾಲೇಜ್ ಪುತ್ತೂರಿನಲ್ಲಿ ಆದಾಗ ಇಂತಹ ಸವಿರುಚಿ ಆಹಾರೋದ್ಯಮಕ್ಕೆ ಬಹಳಷ್ಟು ಬೇಡಿಕೆ ಬರಲಿದೆ. ಇಂದು ದುಡ್ಡಿಗೆ ಯಾರೂ ಕ್ಯಾರೂ ಮಾಡೋದಿಲ್ಲ. ಉತ್ತಮ ಹೊಟೇಲ್, ಉತ್ತಮ ಪರಿಸರ, ಉತ್ತಮ ಪಾರ್ಕಿಂಗ್ ವ್ಯವಸ್ಥೆಗಳಿದ್ದಾಗ ಜನರು ಹುಡುಕಿಕೊಂಡು ಬರುತ್ತಾರೆ. ಮಂಗಳೂರಿನಲ್ಲಿ ಎಲ್ಲಿ ಒಳ್ಳೆಯ ಮೀನಿನ ಹೋಟೆಲ್ ಇದೆಯಾ ಅಂತ ತಿಳಿದುಕೊಂಡು ಅಲ್ಲಿಗೆ ಹೋಗುತ್ತಾರೆ. ಯಾಕೆಂದರೆ ಮೀನಿನ ಹೋಟೆಲ್‌ಗೆ ಅಷ್ಟು ಬೇಡಿಕೆ ಇದೆ. ಹೊಟೇಲ್ ಉದ್ಯಮದಲ್ಲಿ ಸುಮಾರು 15 ವರುಷ ಅನುಭವವಿರುವ ಮಧುಸೂಧನ್ ಶೆಣೈ ಮತ್ತು ಅವರ ತಂಡ ಈ ಹೊಟೇಲ್ ಉದ್ಯಮದಲ್ಲಿ ಸಾಕಷ್ಟು ಪಳಗಿದವರಾಗಿದ್ದಾರೆ. ಪುತ್ತೂರಿನ ಜನತೆಗೆ ಒಳ್ಳೆಯ ಟೇಸ್ಟಿ ಫುಡ್ ಇಲ್ಲಿ ಸಿಗುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಸೀತಾರಾಮ ರೈಯವರ ಅಮೃತ ಹಸ್ತದಿಂದ ಉದ್ಘಾಟನೆ, ಯಶಸ್ವಿಯಾಗಲಿ-ಶಶಿಕುಮಾರ್ ರೈ:
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಪುತ್ತೂರಿನ ಓರ್ವ ಉದ್ಯಮಿಯಾಗಿದ್ದು, ಸಾವಿರಕ್ಕೂ ಮಿಕ್ಕಿ ಜನರಿಗೆ ಉದ್ಯೋಗ ನೀಡುವ ಮೂಲಕ ಅನ್ನದಾತರಾಗಿರುವ ಹಿರಿಯರಾದ ಸಹಕಾರಿ ರತ್ನ ಸವಣೂರು ಸೀತಾರಾಮ ರೈರವರ ಅಮೃತ ಹಸ್ತದಿಂದ ಇಂದು ಬೆಳಗಿದ ದೀಪ ಮುಂದಿನ ದಿನಗಳಲ್ಲಿ ಗ್ರಾಹಕರ ವಿಶ್ವಾಸ ಗಳಿಸಿಕೊಂಡು ಉತ್ತರೋತ್ತರ ಅಭಿವೃದ್ಧಿ ಹೊಂದಲಿದೆ. ಪುತ್ತೂರಿನ ಹೃದಯಭಾಗದಲ್ಲಿರುವ ಈ ಹೊಟೇಲ್ ಅನ್ನು ಸೀತಾರಾಮ ರೈರವರ ಪ್ರಶಾಂತ್ ಮಹಲ್‌ನಲ್ಲಿನ ಹೆರಿಟೇಜ್ ಫ್ಯಾಮಿಲಿ ಬಾರ್ ರೆಸ್ಟೋರೆಂಟ್ ನಡೆಸುತ್ತಿರುವ ಪರಿಣತರಾದ ಮಧುಸೂದನ್ ಶೆಣೈರವರ ತಂಡ ಈ ಹೊಟೇಲ್‌ಗೆ ಆಗಮಿಸುವ ಗ್ರಾಹಕರಿಗೆ ರುಚಿಕರವಾದ ತಿನಸು ನೀಡಲಿ, ಶ್ರೀ ಮಹಾಲಿಂಗೇಶ್ವರ ದೇವರು ಈ ಹೊಟೇಲ್ ಉದ್ಯಮವನ್ನು ಯಶಸ್ವಿಗೊಳಿಸಲಿ ಎಂದು ಹೇಳಿ ಶುಭ ಹಾರೈಸಿದರು.

ಪುತ್ತೂರಿನಲ್ಲಿ ಉಪ್ಪುಂಚಿ ಪರಿಚಯಿಸಿದ್ದು ಜೊತೆಗೆ ತಂದೂರಿ ಚಿಕನ್ ತುಂಬಾನೇ ಫೇಮಸ್-ಶಿವರಾಮ ಆಳ್ವ:
ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲುಗುತ್ತು ಮಾತನಾಡಿ, ಪುತ್ತೂರಿನ ಅಭಿವೃದ್ಧಿ ನಿಟ್ಟಿನಲ್ಲಿ ಹೊಸ ಮೀನಿನ ಹೊಟೇಲ್ ಗ್ರಾಹಕರಿಗೆ ಸವಿಯೂಟ ನೀಡಲಿದೆ. ಈ ಹೊಟೇಲ್ ಅನ್ನು ಮುನ್ನೆಡೆಸುತ್ತಿರುವ ಮಧುಸೂದನ್, ಹರೀಶ್ ಪೂಜಾರಿರವರು ಎಲ್ಲರಿಗೂ ಚಿರಪರಿಚಿತರು ಜೊತೆಗೆ ಸೇವೆ ನೀಡಲು ಬಂದರೆ ಅವರೇ ಮುಂದಿದ್ದಾರೆ. ಇತ್ತೀಚೆಗೆ ರಾತ್ರಿ ಹನ್ನೆರಡು ಗಂಟೆಗೆ ಮುಂಡೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಊಟದ ಕೊರತೆ ಬಂದಾಗ ಖುದ್ದು ಮಧುಸೂದನ್‌ರವರೇ ಮಳೆಯೆನ್ನು ಲೆಕ್ಕಿಸದೆ ಊಟವನ್ನು ಸಕಾಲದಲ್ಲಿ ಪಾವತಿಸಿರುವುದು ಹೆಮ್ಮೆಯ ವಿಷಯವಾಗಿದೆ. ಪುತ್ತೂರಿನಲ್ಲಿ ಉಪ್ಪುಂಚಿ ಪರಿಚಯಿಸಿದ್ದು ಜೊತೆಗೆ ತಂದೂರಿ ಚಿಕನ್ ತುಂಬಾನೇ ಫೇಮಸ್ ಆಗಿದೆ ಎಂದು ಹೇಳಿ ಶುಭ ಹಾರೈಸಿದರು.
ಶಿರ್ವ ಮಂಚಕಲ್ ಇಲ್ಲಿನ ರವಿ ಭಟ್‌ರವರು ಲಕ್ಷ್ಮೀ ಪೂಜೆ, ರಕ್ಷೋಘ್ನ ಹೋಮ, ನವಗ್ರಹ ಹೋಮ ನೆರವೇರಿಸಿ ಶುಭ ಹಾರೈಸಿದರು. ಹೋಟೆಲ್ ದಿನೇಶ ಭವನದ ಮಾಲಕ ಕುಂಬ್ಳೆ ಗಿರಿಧರ್ ಶೆಣೈ, ಉದ್ಯಮಿ ಎಂ.ಸತೀಶ್ ಕಾಮತ್, ಗಣೇಶ್ ಪೂಜಾರಿರವರೊಂದಿಗೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೊಟೇಲ್ ಸಿಬ್ಬಂದಿಗಳು ಸಹಕರಿಸಿದರು.

ಗ್ರಾಹಕರ ಪ್ರೋತ್ಸಾಹ ಅಗತ್ಯ..
ಹೊಟೇಲ್‌ನಲ್ಲಿ ಬೆಳಿಗ್ಗೆ ಚಾ. ಕಾಫಿ ಹಾಗೂ ತಂಜ್ಞನ ಬೆಂಜನ, ಕುಚಲಕ್ಕಿ ಊಟ, ಸೇಮಿಗೆ, ಗಂಜಿ ಊಟ, ತುಳುನಾಡಿನ ಸಾಂಪ್ರದಾಯಿಕ ತಿಂಡಿ-ತಿನಸುಗಳ ಉಪಹಾರ, ಬಾಳೆಎಲೆಯಲ್ಲಿ ವಿವಿಧ ಮೀನು ಖಾದ್ಯಗಳ ಹಾಗೂ ಬಿರಿಯಾನಿ ಊಟ, ಫ್ರೆಶ್ ಜ್ಯೂಸ್, ಶವರ್ಮಾ ಮತ್ತು ಟಿಕ್ಕ ಇತ್ಯಾದಿಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಿತದರದಲ್ಲಿ ಲಭ್ಯವಾಗಲಿದೆ. ಹೊಟೇಲ್ ಬೆಳಿಗ್ಗೆ ಗಂಟೆ ಏಳರಿಂದ ರಾತ್ರಿ ಗಂಟೆ ಹನ್ನೆರಡವರೆಗೆ ತೆರೆಯಲಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕು.
-ಮಧುಸೂದನ್ ಶೆಣೈ, ಹರೀಶ್ ಪೂಜಾರಿ, ಅರ್ಜುನ್ ಕಾಮತ್, ಪಾಲುದಾರರು


 
            
