ಪುತ್ತೂರು: ಇತ್ತೀಚೆಗೆ ಅಗಲಿದ ದರ್ಬೆ ಬಾಬು ಶೆಟ್ಟಿ ಕಂಪೌಂಡಿನ ದಿನೇಶ್(ದಿನ್ನು) ಶೆಟ್ಟಿರವರ ಶ್ರದ್ಧಾಂಜಲಿ ಕಾರ್ಯವು ಸೆ.8ರಂದು ಪಾಣೆಮಂಗಳೂರಿನ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದಲ್ಲಿ ಜರಗಿತು.

ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ ಸಹಿತ ಹಲವರು ಹಿತೈಷಿಗಳು ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಅಗಲಿದ ದಿನೇಶ್ ಶೆಟ್ಟಿರವರ ತಾಯಿ ಪುಷ್ಪಾ ಬಾಬು ಶೆಟ್ಟಿ , ಪತ್ನಿ ಪ್ರೀತಿ, ಪುತ್ರಿಯರಾದ ಧನ್ವಿ, ಧ್ವನಿ, ಸಹೋದರ ಧೀರಜ್ ಶೆಟ್ಟಿ, ಅತ್ತಿಗೆ ರೇಶ್ಮಾ ಶೆಟ್ಟಿ ಸಹಿತ ಕುಟುಂಬಿಕರು ಉಪಸ್ಥಿತರಿದ್ದರು.