ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ, ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಸಂಪ್ಯ ಇದರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೆ.11ರಂದು ಬೆಳಿಗ್ಗೆ ಗಂಟೆ 10ರಿಂದ ಅಪರಾಹ್ನ 2.30ರ ವರೆಗೆ ನಡೆಯಲಿದೆ.
ಶಿಬಿರದಲ್ಲಿ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರುಗಳಾದ ಡಾ.ವಿಶಾಲ್ ಯು.ಪಿ(ಎಂಡಿ) ಹಾಗೂ ಡಾ.ಸ್ವಾತಿ(ಎಂಡಿ) ಭಾಗವಹಿಸಲಿದ್ದು ಮರ್ಕಝುಲ್ ಹುದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಿಗೆ, ಶಿಕ್ಷಕ ವೃಂದಕ್ಕೆ ಮತ್ತು ಸಿಬ್ಬಂದಿಗಳಿಗೆ ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.