ಶ್ರೀರಾಮ್ ಫೈನಾನ್ಸ್‌ನಿಂದ ರೂ.37ಲಕ್ಷದ ವಿದ್ಯಾರ್ಥಿ ನಿಧಿ ವಿತರಣೆ

0

ಪುತ್ತೂರು, ಸುಳ್ಯ, ನೆಲ್ಯಾಡಿ ಶಾಖೆಯ ಭಾಗದ 868 ವಿದ್ಯಾರ್ಥಿಗಳಿಗೆ ವಿತರಣೆ

ಪುತ್ತೂರು: ಪರಸ್ಪರ ಸಹಕಾರ-ಸಹಬಾಳ್ವೆ ಯಾವುದೇ ಕಾರ್ಯದ ಮೂಲಗುರಿಯಾಗಬೇಕು ಎಂಬ ಮಾತಿದೆ. ಸಂಸ್ಥೆಯೊಂದು ಕೇವಲ ಲಾಭದ ಉದ್ದೇಶ ಮಾತ್ರವಲ್ಲದೇ, ತನ್ನಿಂದ ಯಾರಿಗಾದರೂ ಒಳಿತಾಗಬೇಕು ಎನ್ನುವ ದೂರದೃಷ್ಟಿತ್ವವನ್ನು ಹೊಂದಿದರೆ ಶ್ರೇಷ್ಠ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಇದೇ ದಾರಿಯಲ್ಲಿ ಮುನ್ನಡೆಯುತ್ತಿರುವ ಶ್ರೀರಾಮ್ ಫೈನಾನ್ಸ್‌ ಮಾದರಿಯಾಗಿದೆ.


ಕಳೆದ 52 ವರ್ಷಗಳಿಂದ ಸಾಲ ಸೌಲಭ್ಯವನ್ನು ನೀಡಿಕೊಂಡು ಬಂದಿರುವ ಸಂಸ್ಥೆ ಸಾರಿಗೆ, ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ 13 ವರ್ಷಗಳಿಂದ ವಿದ್ಯಾರ್ಥಿ ನಿಧಿಯನ್ನು ನೀಡುತ್ತಾ ಬಂದಿದೆ. ಲೆಕ್ಕವಿಲ್ಲದಷ್ಟು ಗ್ರಾಹಕರಿಗೆ ಎಲ್ಲಾ ರೀತಿಯಲ್ಲಿಯೂ ಸಾಲ ಸೌಲಭ್ಯ ನೀಡಿರುವ ಸಂಸ್ಥೆಯೊಂದು ವಿದ್ಯಾರ್ಥಿಗಳ ವಿಚಾರದಲ್ಲಿ ಮಾದರಿ ಯೋಚನೆ-ಯೋಜನೆ ಮಾಡಿರುವುದು ಶ್ಲಾಘನೀಯ. ಪ್ರೌಢಶಾಲೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಿಸಿ ಅವರ ಭವಿಷ್ಯದ ಹಾದಿಗೆ ಸ್ಪೂರ್ತಿಯಾಗಿದೆ.


ಈಗಾಗಲೇ ಪುತ್ತೂರು, ಸುಳ್ಯ, ನೆಲ್ಯಾಡಿ ಶಾಖೆಯ ಒಟ್ಟು 868 ವಿದ್ಯಾರ್ಥಿಗಳಿಗೆ ರೂ.37ಲಕ್ಷ ಮೌಲ್ಯದ ವಿದ್ಯಾರ್ಥಿ ನಿಧಿ ಒದಗಿಸಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೂ.1,36,41,000ಮೌಲ್ಯದ ವಿದ್ಯಾರ್ಥಿ ನಿಧಿ ಒದಗಿಸುವ ಗುರಿ ಹಾಗೂ ಉದ್ದೇಶವನ್ನು ಇಟ್ಟುಕೊಂಡಿದೆ.
ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಇದರ ಆಶ್ರಯದಲ್ಲಿ ವಿದ್ಯಾರ್ಥಿ ನಿಧಿ ವಿತರಣಾ ಸಮಾರಂಭ ಸೆ.9ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶ್ರೀರಾಮ್ ಫೈನಾನ್ಸ್‌ನ ಜೋನಲ್ ಬಿಸಿನೆಸ್ ಹೆಡ್ ಶರತ್ಚಂದ್ರ ಭಟ್ ಕಾಕುಂಜೆ ಉದ್ಘಾಟಿಸಿದರು. ಶಾಸಕ ಅಶೋಕ್ ಕುಮಾರ್ ರೈ ವಿದ್ಯಾರ್ಥಿ ನಿಧಿ ವಿತರಿಸಿದರು.


ಕಾರ್ಯಕ್ರಮದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕ ಆಂಜನೇಯ ರೆಡ್ಡಿ, ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ, ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಡೀನ್ ಡಾ|ವಿಜಯಸರಸ್ವತಿ, ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೊಡ್ತುಗುಳಿ, ಧರಿತ್ರಿ ಅಸೋಸಿಯೇಟ್ಸ್‌ನ ಮಾಲಕ ಮುರುಳಿಕೃಷ್ಣ ಹಸಂತಡ್ಕ, ಅಜರ್ ಲಾಜಿಸ್ಟಿಕ್ಸ್‌ನ ಮಾಲಕ ಖಲಂದರ್, ಗೂಡ್ಸ್ ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಘುರಾಮ ಪಾಟಳಿ, ಶ್ರೀರಾಮ್ ಫೈನಾನ್ಸ್‌ನ ಲೀಗಲ್ ಹೆಡ್ ಉಲ್ಲಾಸ್ ವಿ ನಾಯಕ್, ಜೋನಲ್ ಪ್ರಾಡಕ್ಟ್ ಹೆಡ್ ನಾಗರಾಜ್ ಬಿ, ಸ್ಟೇಟ್ ಹೆಡ್ ಸದಾಶಿವ, ಜೋನಲ್ ಪ್ರಾಡಕ್ಟ್ ಹೆಡ್ ಚಂದ್ರಹಾಸ ಆಳ್ವ, ರೀಜಿನಲ್ ಬಿಸಿನೆಸ್ ಹೆಡ್ ಚೇತನ್ ಅರಸ್, ಮಹೇಶ್ ಕುಮಾರ್ ಸಿ ಯಚ್, ಜಯಪ್ರಕಾಶ್ ರೈ ಬಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here