ಉದನೆ : ಇಲ್ಲಿ ಉಪ್ಪಿನಂಗಡಿ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ ನಡೆಯಿತು .ಸಂತ ಜಾರ್ಜ್ ಹೈಸ್ಕೂಲ್ ಇಲ್ಲಿನ ನಿವೃತ್ತ ದೈ .ಶಿಕ್ಷಕರಾದ ಉಲ್ ಹನ್ನನ್ ದೀಪ ಬೆಳಗಿಸುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಸಭಾಧ್ಯಕ್ಷತೆ ವಹಿಸಿ ಕ್ರೀಡಾಕೂಟಕ್ಕೆ ಹಾಗೂ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಉಪ್ಪಿನಂಗಡಿ ವಲಯ ದೈ.ಶಿಕ್ಷಣ ನೋಡಲ್ ಆಧಿಕಾರಿಗಳಾದ ಕುಶಾಲಪ್ಪ ಗೌಡ,ಹಾಗೂ ಗಂಗಾಧರ ತ್ರೋಬಾಲ್ ಅಂಕಣವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಪೂರ್ವ ವಿದ್ಯಾರ್ಥಿ ಸಂಘದ ಕಾರ್ಯ ದರ್ಶಿ ವಿಶ್ವನಾಥ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ,ನೆಲ್ಯಾಡಿ ವಲಯ ಅಧ್ಯಕ್ಷರಾದ ಕುಶಾಲಪ್ಪ ಗೌಡ ಕಳಪ್ಪಾರು,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಜಯಪ್ರಕಾಶ್, ಸಂಸ್ಥೆಯ ಮೇಲ್ವಿಚಾರಕರಾದ ಡೀಕನ್ ಜಾರ್ಜ್ ,ಸೈಂಟ್ ಆಂಟನೀಸ್ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀಧರ ಗೌಡ,ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ನ ಮುಖ್ಯಗುರುಗಳಾದ ಸಿಬಿಚ್ಚನ್ ಟಿ.ಸಿ ಉಪಸ್ಥಿತರಿದ್ದರು.
ಉಪ್ಪಿನಂಗಡಿ ವಲಯದ ಒಟ್ಟು ಒಂಬತ್ತು ತಂಡಗಳ ಸ್ಪರ್ಧಿಗಳು, ತಂಡದ ಮೇಲ್ವಿಚಾರಕರು, ಪೂರ್ವ ವಿದ್ಯಾರ್ಥಿಗಳು,ಪಾಲಕ ವೃಂದ,ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಮುಖ್ಯಗುರು ಶ್ರೀಧರ ಗೌಡ ಸ್ವಾಗತಿಸಿ, ದೈ.ಶಿಕ್ಷಕ ರಾಜೇಶ್ ರೈ ವಂದಿಸಿದರು.ಶಿಕ್ಷಕ ಯಶೋಧರ ಕಾರ್ಯಕ್ರಮ ನಿರ್ವಹಿಸಿದರು.