ರೂ.40.11 ಕೋಟಿ ವ್ಯವಹಾರ, ರೂ.20.31ಕೋಟಿ ಲಾಭ, ಶೇ.20 ಡಿವಿಡೆಂಡ್

ಪುತ್ತೂರು: ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ರೂ.40.11 ಕೋಟಿ ವ್ಯವಹಾರ ನಡೆಸಿ ರೂ.20,31,318.06 ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ಸೆ.11ರಂದು ಸಂಘದ ಪ್ರಧಾನ ಕಚೇರಿಯ ಮಾಧುರಿ ಸೌಧದ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವರ್ಷಾಂತ್ಯಕ್ಕೆ ಸಂಘದಲ್ಲಿ 5,020 ಸದಸ್ಯರಿಂದ ರೂ.14,60,880 ಪಾಲು ಬಂಡವಾಳ, ರೂ.4,38,70,124-48 ವಿವಿಧ ಠೇವಣಾತಿ, ರೂ.3,33,24,286.21 ನಿಧಿಗಳನ್ನು ಹೊಂದಿದೆ. ವರ್ಷಾಂತ್ಯಕ್ಕೆ ವಿವಿಧ ರೂಪದಲ್ಲಿ ರೂ.2,32,33390 ಸಾಲ ವಿತರಿಸಲಾಗಿದೆ.ವರದಿ ವರ್ಷದಲ್ಲಿ ಒಟ್ಟು 1,14,052.860 ಕೇ.ಜಿ ಜೇನು ಖರೀದಿಸಿ, 1,16,298.510 ಕೆ.ಜಿ ಜೇನು ಮಾರಾಟ ಮಾಡಲಾಗಿದೆ. ಜೇನು, ಜೇನು ಮಯಣ, ಜೇನು ಕೃಷಿ ಸಲಕರಣೆಗಳು, ಗ್ರಾಮೋದ್ಯೋಗ ವಸ್ತುಗಳು ಸೇರಿದಂತೆ ಒಟ್ಟು ರೂ.1,80,79,187.57 ವ್ಯವಹಾರ ನಡೆಸಲಾಗಿದೆ ಎಂದು ತಿಳಿಸಿದರು.

ಸನ್ಮಾನ:
ಕರ್ನಾಟಕ ರಾಜ್ಯ ರೈತ ಉತ್ಪಾದಕರ ಸಂಸ್ಥೆಗಳ ಸಹಕಾರ ಸಂಘ ಮಹಾ ಮಂಡಲ ಬೆಂಗಳೂರು ಇದರ ನಿರ್ದೇಶಕ ವೀರಪ್ಪ ಗೌಡ ಹಾಗೂ ಸಂಘದಲ್ಲಿ ಸೇಲ್ಸ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾದ ಆಶಾ ಇವರನ್ನು ಸನ್ಮಾನಿಸಲಾಯಿತು.

ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಜೇನು ಪೂರೈಸಿದ ಮನಮೋಹನ ಅರಂಬ್ಯ, ಬಶೀರ್ ಎಂ.ಸುಳ್ಯ, ರಾಧಾಕೃಷ್ಣದಾಸ್ ಉಬರಡ್ಕ, ಚಂದ್ರಶೇಖರ ಗೌಡ ನೀರಬಿದರೆ ಸುಳ್ಯ, ಸುಧಾಕರ ಕೇಪು, ಹರೀಶ್ ಕೋಡ್ಲ, ಶಿವಾನಂದ ಉಜಿರೆ, ಲಿಂಗಪ್ಪ ಗೌಡ ಅಮರಪಡ್ನೂರು, ದೇವದಾಸ್ ಕಾರ್ಕಳ, ಚೆನ್ನಕೇಶವ ದೇವಚಳ್ಳ ಸುಳ್ಯ, ಬಾಬು ಕಾರ್ಕಳ ಹಾಗೂ ಅತೀ ಖರೀದಿ ಮಾಡಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕರುಣಾಕರ ಉಡುಪಿ, ಎಸ್.ಜಿಆರ್.ಎಸ್ ಟ್ರೇರ‍್ಸ್ ಮೈಸೂರು, ತತ್ವ ಆಗ್ರೋಟಿಕ್ ಬೆಂಗಳೂರ, ಕಾಮತ್ ಜನರಲ್ ಸ್ಟೊರ್ ಸುಬ್ರಹ್ಮಣ್ಯ ಹಾಗೂ ಬಂಟ್ವಾಳ ತಾಲೂಕು ರಬ್ಬರ್ ಮತ್ತು ಜೇನು ವ್ಯವಸಾಯಗಾರ ಸೇವಾ ಸಹಕಾರಿ ಸಂಘಗಳನ್ನು ಬಹುಮಾನ ನೀಡಿ ಗೌರವಿಸಲಾಯಿತು.

ನಿರ್ದೇಶಕರಾದ ಜಿ.ಪಿ. ಶ್ಯಾಮ ಭಟ್, ಜನಾರ್ದನ ಚೂಂತಾರು, ಡಿ. ತನಿಯಪ್ಪ, ಶ್ರೀಶ ಕೊಡುವೂರು, ಎಚ್. ಸುಂದರ ಗೌಡ, ಇಂದಿರಾ.ಕೆ, ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಭಟ್ ಎಂ., ಶಿವಾನಂದ, ಮೋಹನ ಎ, ಪುಟ್ಟಣ್ಣ ಗೌಡ ಕೆ, ಗೋವಿಂದ ಭಟ್ ಪಿ., ಶಂಕರ ಪೆರಾಜೆ, ಸರಸ್ವತಿ ವೈ. ಪಿ, ಸುಶೀಲ ಸಭೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಸಿಬ್ಬಂದಿ ದಕ್ಷಿತಾ ಪ್ರಾರ್ಥಿಸಿದರು. ಅಧ್ಯಕ್ಷ ಚಂದ್ರ ಕೋಲ್ಚಾರ್ ಸ್ವಾಗತಿಸಿದರು. ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿಂಡಿಮನೆ ವಾರ್ಷಿಕ ವರದಿ, ಆಯ-ವ್ಯಯಗಳನ್ನು ಮಂಡಿಸಿದರು. ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ವಂದಿಸಿದರು.