ಕಡಬ ತಾಲೂಕು ಕಛೇರಿಯಲ್ಲಿ ನಾರಾಯಣ ಗುರು ಜಯಂತಿ

0

ಕಡಬ: ಕಡಬ ತಾಲೂಕು ಕಛೇರಿಯಲ್ಲಿ ಕಡಬ ತಾಲೂಕು ನಾಡ ಹಬ್ಬ ಆಚರಣಾ ಸಮಿತಿ ಇದರ ಸಹಯೋಗದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಸೆ.8ರಂದು ನಡೆಯಿತು.


ಈ ಸಂದರ್ಭದಲ್ಲಿ ಕಡಬ ತಾಲೂಕು ಬಿಲ್ಲವ ಸಂಚಲನ ಸಮಿತಿ ಪ್ರಧಾನ ಸಂಚಾಲಕ ಸತೀಶ್ ಕೆ. ಐತ್ತೂರು ಮಾತನಾಡಿ, ಗುರುಗಳ ವಿಚಾರವನ್ನು ಸಭೆಗೆ ತಿಳಿಸಿ ಸೆ.21ರಂದು ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯುವ ಗುರುಪೂಜೆಗೆ ಆಮಂತ್ರಣ ನೀಡಿದರು.

ಕಾರ್ಯಕ್ರಮದಲ್ಲಿ ಕಡಬ ವಲಯ ಸಂಚಾಲಕ ಲಕ್ಷ್ಮೀಶ್ ಬಂಗೇರ, ಪಟ್ಟಣ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ ಬೈಲಂಗಡಿ,ಯುವವಾಹಿನಿ(ರಿ.) ಕಡಬ ಘಟಕ ಅಧ್ಯಕ್ಷರಾದ ಪ್ರಶಾಂತ್ ಎನ್.ಎಸ್ ಕಡಬ, ಕಡಬ-ಕುಟ್ರುಪ್ಪಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಜಯಪ್ರಕಾಶ್ ದೋಳ, ಕಾರ್ಯದರ್ಶಿ ಕೃಷ್ಣಪ್ಪ ಅಮೈ, ಜೊತೆಕಾರ್ಯದರ್ಶಿ ನಿಲೇಶ್ ನಂದೋಳಿ, ಮಹಿಳಾ ವೇದಿಕೆ ಅಧ್ಯಕ್ಷ ಹರೀಣಾಕ್ಷಿ ನಂದೋಳಿ, ಮಾಜಿ ವಲಯ ಸಂಚಾಲಕರಾದ ಸುಂದರ ಪೂಜಾರಿ ಅಂಗಣ, ಬಲ್ಯ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಡಿ.ಎಚ್., ಮಾಜಿ ಅಧ್ಯಕ್ಷ ಆನಂದ ಮಠದ ಬೈಲು, ಮಾಜಿ ಮಹಿಳಾ ವಲಯ ಸಂಚಾಲಕಿಯಾದ ಗೀತಾ ಉಂಡಿಲ, ಯುವವಾಹಿನಿ(ರಿ.) ಕಡಬ ಘಟಕದ ಮಾಜಿ ಅಧ್ಯಕ್ಷರಾದ ಶಿವಪ್ರಸಾದ್ ನೂಚಿಲ, ಕೊಂಬಾರು ಗ್ರಾಮ ಸಮಿತಿ ಅಧ್ಯಕ್ಷರುರಾದ ನವೀನ್ ಕೊಂಬಾರು, ರೆಂಜಿಲಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ಸಂಜೀವ ಪೂಜಾರಿ ನೈಲ, ಯುವವಾಹಿನಿ(ರಿ.) ಕಡಬ ಘಟಕದ ಮಹಿಳಾ ನಿರ್ದೇಶಕರಾದ ಜಯಂತಿ ನಂದೋಳಿ, ಮಾಜಿ ನಿರ್ದೇಶಕರಾದ ಸರಿತ ಉಂಡಿಲ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here