ಮಾಡಾವಿನಲ್ಲಿ ನೂತನ ಮದ್ರಸ ಕಟ್ಟಡ ಉದ್ಘಾಟನೆ ಸಮಾರಂಭ, ಹಾಗೂ ಸನ್ಮಾನ ಕಾರ್ಯಕ್ರಮ   

0

ಕೆಯ್ಯೂರು: ಬದ್ರಿಯಾ ಜುಮಾ ಮಸೀದಿ ಮಾಡಾವು ಇದರ ಆಶ್ರಯದಲ್ಲಿ ಮರ್ ಹೂಂ ಮಹಮ್ಮದ್ ಹಾಜಿ ಮತ್ತು ಬೀಫಾತಿಮಾ ಇವರ ಸವಿನೆನಪಿಗಾಗಿ ಸೆ.7ರಂದು ಕೆ.ಎನ್ ಆಟಕ್ಕೋಯ ತಂಙಳ್ ವೇದಿಕೆ ಮಾಡಾವಿನಲ್ಲಿ  ಸಂಜೆ 4 ಗಂಟೆಗೆ ನೂತನ ಮದ್ರಸ ಕಟ್ಟಡ ಉದ್ಘಾಟನೆ ಸಮಾರಂಭ ನಡೆಯಿತು. ಇದರ ಉದ್ಘಾಟನೆಯನ್ನು ರಿಬ್ಬನ್ ತುಂಡರಿಸುವ ಮೂಲಕ ಬಹು| ಅಲ್ ಹಾಜ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಇವರು ನೆರವೇರಿಸಿದರು. 

ದುಆಃ ಬಹು| ಅಸ್ಸಯ್ಯದ್ ಇಸ್ಮಾಯಿಲ್ ಬುಖಾರಿ ತಂಙಳ್ ಮಾಡಾವು ನೆರವೇರಿಸಿದರು. ನಂತರ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಬದ್ರಿಯ ಜುಮಾ ಮಸೀದಿ ಅಧ್ಯಕ್ಷ  ಹಸೈನಾರ್ ಹಾಜಿ ಸಂತೋಷ್ ವಹಿಸಿದ್ದರು. ಅಶ್ರಫ್ ಸಖಾಫಿ ಮಡಾವು ಸ್ವಾಗತ ಮಾಡಿ, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಝೈನುಲ್ ಅಭಿದೀನ್ ತಙಲ್ ದುಗ್ಗಳಡ್ಕ ನೆರವೇರಿಸಿದರು. ಅಡ್ವೇಕೆಟ್ ಹನೀಫ್ ಹೂದವೀ ಮಾಡನ್ನೂರ್, ಸೈಫುಲ್ಲಾ ಬಾಖವಿ ಮಾಡಾವು ಇವರು ಮುಖ್ಯ ಪ್ರಭಾಷಣಗೈದರು.

ಗಣ್ಯ ಉಪಸ್ಥಿತಿಯಲ್ಲಿ  ಬದ್ರಿಯಾ ಜುಮಾ ಮಸೀದಿ ಮಾಡಾವು ಮಾಜಿ ಖತೀಬರಾದ, ಸಂಶುದ್ದೀನ್ ದಾರಿಮಿ, ಅಬೂಬಕ್ಕರ್ ಸಆದಿ, ನೌಫಲ್ ರಹ್ಮಾನಿ, ಮಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಶಶಿಧರ್ ರಾವ್ ಬೊಳಿಕ್ಕಳ, ಎಂ ಎಸ್ ಮಹಮ್ಮದ್, ಇಬ್ರಾಹಿಂ ಹಾಜಿ ಎಂ.ಇ, ಎ.ಕೆ ಜಯರಾಮ ರೈ ಕೆಯ್ಯೂರು, ಉಮರ್ ಮುಸ್ಲಿಯಾರ್ ನಂಜೆ, ಸಂತೋಷ್ ಕುಮಾರ್  ರೈ ಇಳಾಂತಜೆ, ವಿನೋದ್ ಕುಮಾರ್ ಕೆ. ಎಸ್, ಅಬ್ದುಲ್ ಖಾದರ್ ಹಾಜಿ ಮೇರ್ಲ,ಜಯಂತ ಪೂಜಾರಿ ಕೆಂಗುಡೇಲು, ಆನಂದ ರೈ ದೇವಿನಗರ ,,ಹನೀಫ್ ಕೆ ಎಂ, ಮೂಸ ಹಾಜಿ ಚೆರೂರ್, ಬಾಸಿತ್ ಹುದಮಿ ಕೈ ಕಂಬ, ಅಬೂಬಕ್ಕರ್ ಹಾಜಿ ಬೆಳ್ಳಾರೆ, ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸನ್ಮಾನ ಕಾರ್ಯಕ್ರಮ
ಬದ್ರಿಯಾ ಜುಮಾ ಮಸೀದಿ ಮಾಡಾವು, ಗೌಸಿಯ ಯಂಗ್ ಮೆನ್ಸ್ ಅಸೋಸಿಯನ್ಸ್ ವತಿಯಿಂದ ಮದ್ರಾಸ ಕಟ್ಟಡವನ್ನು ದಾನವಾಗಿ ನಿರ್ಮಿಸಿಕೊಟ್ಟ ಫ್ಯಾಮಿಲಿ ಗ್ರೂಪ್ ಮಾಡಾವು ಸಹೋದರರಾದ ಸುಲೈಮಾನ್ ಹಾದಿ, ಅಬ್ದುಲ್ ಹಮೀದ್ ಹಾಜಿ, ಇಬ್ರಾಹಿಂ ಹಾಜಿ, ನಝೀರ್ ಹಾಜಿ, ಪಿ.ಬಿ ಅಬೂಬಕ್ಕರ್ ಹಾಜಿ ಸವಣೂರು, ಕೆ.ವೈ ಸುಲೈಮಾನ್ ಹಾಜಿ ಇಂದ್ರಾಜೆ, ಅಬೂಬಕ್ಕರ್ ಕಟತ್ತಾರು ಇವರನ್ನು ಹಾರ ಹಾಕಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಅಬ್ದುಲ್ ಬಶೀರ್ ಮಾಡಿ, ಪಿ.ಎಂ ಅಬ್ದುಲ್ ಖಾದರ್ ಮುಸ್ಲಿಯರ್ ವಂದಿಸಿದರು. 

LEAVE A REPLY

Please enter your comment!
Please enter your name here