ಪುತ್ತೂರು: ಪುತ್ತೂರು ತಾಲೂಕು ಮುಖ್ಯಗುರುಗಳ ಸಂಘ ವತಿಯಿಂದ ನಿವೃತ್ತ ಶಿಕ್ಷಕಿ ಜುಲಿಯಾನ ವಾಸ್ ಉಪ್ಪಿನಂಗಡಿ ಮಠ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ತಾರಾನಾಥ ಪಿ, ಪಿಎಂಶ್ರೀ ಶಾಲೆ ವೀರಮಂಗಲ ಇವರಿಗೆ ಗುರುವಂದನೆ ಕಾರ್ಯಕ್ರಮವು ಪುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಕೋಡಿಂಬಾಡಿ ವಹಿಸಿದ್ದರು. ಉಪ್ಪಿನಂಗಡಿ ಮಾದರಿ ಶಾಲೆಯ ಮುಖ್ಯಗುರುಗಳಾದ ಹನುಮಂತಯ್ಯ ಗೌರವ ಸನ್ಮಾನ ನೆರವೇರಿಸಿದರು.
ಸನ್ಮಾನಿತರ ಕುರಿತು ಹಾರಾಡಿ ಮಾದರಿ ಶಾಲೆಯ ಮುಖ್ಯಗುರು ಕುಕ್ಕ ಕೆ, ಜಿಲ್ಲಾ ಸಂಘದ ಅಧ್ಯಕ್ಷರು ಸವಣೂರು ಶಾಲೆಯ ಮುಖ್ಯಗುರು ನಿಂಗರಾಜು, ಕೆಮ್ಮಾಯಿ ಶಾಲೆಯ ಮುಖ್ಯಗುರು ಮರಿಯಮ್ಮ ಮಾತನಾಡಿದರು ಮುಖ್ಯಗುರುಗಳಾದ ಮಹೇಶ್ ರಾಮಕುಂಜ, ಆನಂದ ಅಜಿಲ ಕಡಬ, ಸಂತೋಷ ಕೆಮ್ಮಿಂಜೆ, ಜಯಶ್ರೀ ಕೆಮ್ಮಾರ, ಜಯಂತಿ ಅರಿಯಡ್ಕ, ಶಶಿಕಲಾ ಪಾಪೆಮಜಲು, ಪುಷ್ಪಾ ಕೆ ಚಿಕ್ಕಮುಡ್ನೂರು, ಲಿಂಗಮ್ಮ ಇರ್ದೆ, ಯಶೋದಾ ಪುತ್ತೂರು, ನಿರ್ಮಲ ಸಾಲ್ಮರ,ಭವಾನಿ ಬಲ್ನಾಡು, ಜ್ಯೋತಿ ಕಕ್ಕೂರು,ಕಮಲಾ ಸರ್ವೆ, ಜಾನಕಿ ಪೇರಳ್ತಡ್ಕ, ವಿಶಾಲಾಕ್ಷಿ ಮಣಿಕ್ಕರ ಉಪಸ್ಥಿತರಿದ್ದರು. ಕಬಕ ಶಾಲಾ ಮುಖ್ಯಶಿಕ್ಷಕ ಬಾಬು ಟಿ ಸ್ವಾಗತಿಸಿದರು. ಬಜತ್ತೂರು ಶಾಲಾ ಮುಖ್ಯಶಿಕ್ಷಕ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.