ಮುಕ್ಕೂರು‌: 16 ನೇ ವರ್ಷದ ಗಣೇಶೋತ್ಸವಕ್ಕೆ ಆರ್ಥಿಕ ಸಹಕಾರ ನೀಡಿದವರ‌ ಮನೆಗೆ ಲೆಕ್ಕಪತ್ರ

0

ಪ್ರಗತಿಪರ ಕೃಷಿಕ ಮೋಹನ ಬೈಪಡಿತ್ತಾಯ ಅವರ ಮನೆಯಲ್ಲಿ ಲೆಕ್ಕಪತ್ರ ಹಸ್ತಾಂತರಿಸಿ ಚಾಲನೆ
ಅಂಚೆ ಮೂಲಕ ಮನೆ ಮನೆಗೆ ಜಮೆ, ಖರ್ಚು, ಉಳಿತಾಯದ ಲೆಕ್ಕ ಇರುವ ಪತ್ರ

ಮುಕ್ಕೂರು : ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಆ.27 ರಂದು ನಡೆದ ಹದಿನಾರನೇ ವರ್ಷದ ಗಣೇಶೋತ್ಸವವೂ ಊರ ಪರವೂದ ಬಂದುಹಳ ಸಹಕಾರದಿಂದ ಅಭೂತಪೂರ್ವ ರೀತಿಯಲ್ಲಿ ಸಂಪನ್ನಗೊಂಡಿದ್ದು ಇದರ ಯಶಸ್ಸಿಗೆ ಧನ ಸಹಾಯದ ಮೂಲಕ ಕೈ ಜೋಡಿಸಿದವರ ಮನೆ ಮನೆಗೆ ಲೆಕ್ಕಪತ್ರ ತಲುಪಿಸುವ ಕಾರ್ಯಕ್ಕೆ ಸೆ.11 ರಂದು‌ ಚಾಲನೆ ನೀಡಲಾಯಿತು.

ಕಳೆದ ಕೆಲ ವರ್ಷಗಳಿಂದ ಪ್ರತಿ ವರ್ಷದ ಗಣೇಶೋತ್ಸವದ ಜಮೆ, ಖರ್ಚು, ಉಳಿತಾಯದ ವಿವರಗಳನ್ನು ಅಂಚೆ ಪತ್ರದಲ್ಲಿ ಮುದ್ರಿಸಿ ದೇಣಿಗೆ ನೀಡಿದವರ ಮನೆಗಳಿಗೆ ತಲುಪಿಸುವ ವಿಶಿಷ್ಟ ಪ್ರಯತ್ನ ಮುಕ್ಕೂರು ಗಣೇಶೋತ್ಸವದ ಮೂಲಕ ನಡೆಯುತ್ತಿದೆ.

ಈ‌ ಬಾರಿಯ 16 ನೇ ವರ್ಷದ ಲೆಕ್ಕಚಾರದ ಪತ್ರವನ್ನು ಗುರುವಾರ ಪ್ರಗತಿಪರ ಕೃಷಿಕ ಮೋಹನ ಬೈಪಡಿತ್ತಾಯ ಅವರ ನಿವಾಸದಲ್ಲಿ ಅವರಿಗೆ ಹಸ್ತಾಂತರಿಸುವ ಮೂಲಕ‌‌ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಮಾಜಿ ಅಧ್ಯಕ್ಷರಾದ ಪೂವಪ್ಪ‌ ನಾಯ್ಕ ಕೊಂಡೆಪ್ಪಾಡಿ, ರಮೇಶ್ ಕಾನಾವು, ರವಿ ಕುಂಡಡ್ಕ, ಜಯಂತ ಕುಂಡಡ್ಕ, ವೆಂಕಟರಮಣ ಕುಂಡಡ್ಕ, ಸದಸ್ಯರಾದ ವಸಂತ ನಾಯ್ಕ ಕುಂಡಡ್ಕ ಉಪಸ್ಥಿತರಿದ್ದರು.

ಅಂಚೆ ಮೂಲಕ ಮನೆ ಮನೆಗೆ
16 ನೇ ವರ್ಷದ ಗಣೇಶೋತ್ಸವಕ್ಕೆ ಆರ್ಥಿಕ‌ ಹಾಗೂ ಇತರೆ ರೂಪದಲ್ಲಿ ಸಹಾಯ‌ ನೀಡಿದ ಪ್ರತಿ ವ್ಯಕ್ತಿಗಳಿಗೂ ಖರ್ಚು ವೆಚ್ಚದ‌ ಲೆಕ್ಕಪತ್ರವೂ ಅಂಚೆಯ ಮೂಲಕ ತಲುಪಲಿದೆ.ಈ ವರ್ಷ‌ ಜಮೆ‌ ಆದ‌ ಮೊತ್ತ, ಖರ್ಚು ವಿವರ, ಉಳಿತಾಯದ ವಿವರ ಈ ಪತ್ರದಲ್ಲಿ ಇರಲಿದೆ.

LEAVE A REPLY

Please enter your comment!
Please enter your name here