ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಮತ್ತು ಲೇಡಿಹಿಲ್ ವಿಕ್ಟೋರಿಯ ಶಾಲೆಯ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯು ಸೆ.12ರಂದು ಮಂಗಳೂರಿನ ಮಂಗಳಾ ಈಜು ಕೊಳದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಸುದಾನ ವಸತಿಶಾಲೆಯ ವಿದ್ಯಾರ್ಥಿಗಳಾದ ನಿಹಾರಿಕಾ ಎಸ್ ಹೆಚ್ (10ನೇ), 4೦೦ ಮೀ ಪ್ರೀ ಸ್ಟೈಲ್ ನಲ್ಲಿ ಕಂಚು, 5೦ ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಕಂಚುಗಳಿಸಿರುತ್ತಾರೆ. ಆದಿತ್ಯ ಸಿದ್ದಾರ್ಥ್ ಬೌದ್ (6ನೇ) 4೦೦ ಮೀ ಪ್ರೀ ಸ್ಟೈಲ್ ನಲ್ಲಿ ಚಿನ್ನದ ಪದಕ, 5೦ ಮೀ ಬಟರ್ ಫ್ಲೈ ನಲ್ಲಿ ಬೆಳ್ಳಿ, 1೦೦ ಮೀ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ. ಹಾಗೆಯೇ ಮಾನ್ವಿ ಡಿ (9ನೇ) 5೦ ಮೀ ಪ್ರೀ ಸ್ಟೈಲ್, 5೦ ಮೀ ಬ್ರೆಸ್ಟ್ ಸ್ಟ್ರೋಕ್, 1೦೦ ಮೀ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದು ಇವರಲ್ಲಿ ಮಾನ್ವಿ ಡಿ ಮತ್ತು ಆದಿತ್ಯ ಸಿದ್ದಾರ್ಥ್ ಬೌದ್ ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿಜೇತರನ್ನು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಶಾಲಾ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್ ಮತ್ತು ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಅಭಿನಂದಿಸಿ ಶುಭ ಹಾರೈಸಿದ್ದಾರೆ. ಇವರು ಪುತ್ತೂರಿನ ಬಾಲವನ ಈಜುಕೊಳದಲ್ಲಿ ತರಬೇತಿಯನ್ನು ಪಡೆದಿದ್ದಾರೆ.
